ಹಳಿಯಾಳ: ಪುರಸಭೆ ವ್ಯಾಪ್ತಿಯ ತಾನಾಜಿ ಗಲ್ಲಿಯಲ್ಲಿರುವ ಹೈಟೆಕ್ ಅಂಗನವಾಡಿಯ ಎಡಬದಿಯ ಕಿಟಕಿಯನ್ನು ಕಳ್ಳರು ಮುರಿದಿದ್ದು, ಯಾವುದೇ ರೀತಿಯ ವಸ್ತುಗಳನ್ನು ಕಳ್ಳತನ ಮಾಡಿಲ್ಲ.
ಕಳ್ಳತನ ಮಾಡುವ ಉದ್ದೇಶದಿಂದ ಅಂಗನವಾಡಿಯ ಕಿಟಕಿಯನ್ನು ಮುರಿದ ಕಳ್ಳರು ಅಂಗನವಾಡಿಯಲ್ಲಿದ್ದ ದಾಖಲೆಪತ್ರಗಳು, ಕಿರಾಣಿ ಸಾಮಗ್ರಿ ಹಾಗೂ ಆಟಿಕೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆದರೆ ಯಾವುದೇ ವಸ್ತುಗಳನ್ನು ಕಳ್ಳತನ ಮಾಡಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ನಂದಿನಿ ಅವರು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪುರಸಭಾ ಸದಸ್ಯ ನವೀನ ಕಾಟ್ಕರ, ಪೆÇಲಿಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.