• Slide
    Slide
    Slide
    previous arrow
    next arrow
  • ಕುಡ್ಲೆ ಬೀಚ್ ರೆಸ್ಟೋರೆಂಟ್ ಮೇಲೆ ಪೊಲೀಸ್ ದಾಳಿ; ಗಾಂಜಾ, ಮದ್ಯ, ಹುಕ್ಕಾಪೈ ವಶಕ್ಕೆ

    300x250 AD

    ಗೋಕರ್ಣ: ಜಿಲ್ಲೆಯಲ್ಲಿ ಗಾಂಜಾ ಘಾಟು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು ಪೊಲೀಸರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಪೊಲೀಸರು ಅಲ್ಲಲ್ಲೇ ದಾಳಿ ನಡೆಸುತ್ತಿದ್ದು ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಟ ಪ್ರಕರಣಗಳನ್ನು ಬೇಧಿಸುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕುಡ್ಲೆ ರೆಸ್ಟೋರೆಂಟ್ ಒಂದರ ಮೇಲೆ ಕರಾವಳಿ ಕಾವಲು ಪಡೆ ಸಿ.ಪಿ.ಐ. ಮಾರುತಿ ನಾಯಕ ಮತ್ತು ಪಿ.ಎಸ್.ಐ. ದಯಾನಂದ ಜೋಗಳೇಕರ ನೇತೃತ್ವದಲ್ಲಿ ತಂಡ ದಾಳಿ ನಡೆಸಿ ರೆಸ್ಟೋರೆಂಟ್ ವ್ಯವಸ್ಥಾಪಕ ಮತ್ತು ಕೆಲಸಗಾರರಿಂದ ಗಾಂಜಾ, ಮದ್ಯದ ಬಿಯರ್ ಮತ್ತು ಹುಕ್ಕಾಪೈಗಳನ್ನು ವಶಪಡಿಸಿಕೊಂಡು ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ವರದಿಯಾಗಿದೆ.

    ಘಟನೆಯಲ್ಲಿ ಓರ್ವ ಪರಾರಿಯಾಗಿದ್ದಾನೆ. ಬಂಧಿತರೆಲ್ಲರೂ ನೇಪಾಳದವರಾಗಿದ್ದು, ಲಕ್ಷ್ಮಣ ಖಾತ್ರಿ ಬೀರ ಬಹೂದ್ದರ, (33), ಸುಮನ್ ಭರತ ತಮನ್ (23), ಆಯುಸ್ ಲಾಮಾ ಹಿರಾಲಾಲ (21), ಬಿಪಿನ್ ಕೇಸಿ (33), ತೇಜಚಂದ್ರ ಸುಬ್ಬಾ (50) ಬಂಧಿತರಾಗಿದ್ದು, ರಾಜತಮನ ದೋಲ್ ಬಹದ್ದೂರ ತಮಾಂಗ್ ತಪ್ಪಿಸಿಕೊಂಡು ಪರಾರಿಯಾದವನಾಗಿದ್ದಾನೆ.

    300x250 AD

    ಈ ದಾಳಿಯಲ್ಲಿ ಕರಾವಳಿ ಕಾವಲು ಪಡೆ ಎ.ಎಸ್.ಐ. ಸದಾನಂದ ಪಟಗಾರ, ಸಿಬ್ಬಂದಿಗಳಾದ ಶೇಖರ ಗೌಡ, ಪ್ರಶಾಂತ, ಕೇಂದ್ರೀಯ ದಳದ ಸಿಬ್ಬಂದಿ ವಿಷ್ಣು ಕುರ್ಲೆ, ರಾಜೀವ ಗೋವೆಕರ, ನಾಗೇಂದ್ರ ಟಕ್ಕರ ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top