• first
    second
    third
    previous arrow
    next arrow
  • ಪ್ರತಿ ರೈತ ಸಂಪನ್ಮೂಲ ವ್ಯಕ್ತಿ ಆಗುವಂತಾಗಲಿ: ಎಂ.ಪಿ.ಹೆಗಡೆ

    300x250 AD

    ಸಾಂಬಾರ ಬೆಳೆಗಳಲ್ಲಿ ಗುಣಮಟ್ಟ ಮುಖ್ಯವಾದದ್ದು, ತರಬೇತಿ ಯಾರಿಗೆ ಲಭಿಸುತ್ತದೆಯೋ ಅವರಿಗೆ ಸಹಾಯಧನ ಸಿಗುವಂತಾಗಲಿ. ಪ್ರತಿ ರೈತ ಸಂಪನ್ಮೂಲ ವ್ಯಕ್ತಿಯಾಗುವಂತಾಗಲಿ ಎಂದು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ.ಹೆಗಡೆ ಹೇಳಿದರು.

    ಅವರು ಬುಧವಾರ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದಲ್ಲಿ ನಡೆದ ಏಲಕ್ಕಿ ಹಾಗೂ ಕಾಳುಮೆಣಸು ಬೆಳೆಗಳ ಗುಣಮಟ್ಟ ಸುಧಾರಣೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾಹಿತಿ, ತರಬೇತಿಯಿಂದ ಪ್ರತಿ ರೈತ ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ತರಬೇತಿ ಪಡೆದ ರೈತ ತನ್ನ ಅನುಭವದಿಂದ ರಫ್ತು ಮಾಡುವಂತಹ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಾಂಬಾರ ಮಂಡಳಿ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ರೈತರಿಗಾಗಿ ಏಲಕ್ಕಿ ಹಾಗು ಕಾಳು ಮೆಣಸು ಬೆಳೆಗಳ ಗುಣಮಟ್ಟ ಸುಧಾರಣೆ ವಿಚಾರ ಸಂಕಿರಣವನ್ನು ಬುಧವಾರ ಏರ್ಪಡಿಸಲಾಗಿತ್ತು.

    300x250 AD

    ಮುಖ್ಯ ಅತಿಥಿ ಸಂಬಾರ ಮಂಡಳಿ ಶಿವಮೊಗ್ಗದ ಸಹಾಯಕ ನಿರ್ದೇಶಕರಾದ ಡಾ. ಉಸ್ಮಾನ್ ಎನ್ ಎಂ ಕಾಳುಮೆಣಸು ಗುಣಮಟ್ಟ ಕಾಪಾಡಿಕೊಂಡು ಬಂಗಾರದ ಬೆಲೆ ಬರುವಂತೆ ಮಾಡಬಹುದು, ಕಾಳುಮೆಣಸಿನ ನಾಟಿ ಮತ್ತು ಅದಕ್ಕೆ ಬೇಕಾಗುವ ವಾತಾವರಣ ರೋಗದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಮತ್ತೊರ್ವ ಮುಖ್ಯಅತಿಥಿ ಡಾ. ಹರೀಶ್ ಕೆ ಎಂ ಏಲಕ್ಕಿ ಬೆಳೆ, ಅವುಗಳ ಪ್ರಭೇದ, ಅವುಗಳ ಹೊಸ ತಳಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪ್ರಗತಿಪರ ರೈತ ಶಂಭುಶಂಕರ ಶೆಟ್ಟಿ ಹಣಗೆರೆ, ಸಾಗರ ಸಾಂಬಾರ ಬೆಳೆಗಳಲ್ಲಿ ನಿಜವಾದ ಸಮಸ್ಯೆ ಏನು, ಅವುಗಳ ಬಗ್ಗೆ ಅನುಭವದ ಮಾತುಗಳನ್ನು ಆಡಿ ರೈತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.

    ಕುಮಾರಿ ಸೌಖ್ಯ ಹೆಗಡೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಂಬಾರ ಮಂಡಳಿ ಶಿರಸಿ ನಿರ್ದೇಶಕರಾದ ಬಿ ಕೆ ರಮೇಶ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿವಿಧ ತಾಂತ್ರಿಕತೆಯ ಬಗ್ಗೆ ಮಾಹಿತಿ ನೀಡಲಾಯಿತು. ಸುಮಾರು 60 ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪಯೋಗ ಪಡೆದುಕೊಂಡರು. ಕೆ ಎಂ ಗೋಪಾಲ, ಹೇಮಂತ ಕುಮಾರ ಜೆ ಸಾಂಬಾರ ಮಂಡಳಿ ಹಾಗೂ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಕೃಷಿ ಸಲಹೆಗಾರರಾದ ಗುರುಮೂರ್ತಿ ಹೆಗಡೆ ತುಂಬೆಮನೆ ಉಪಸ್ಥಿತರಿದ್ದರು. ಸುನಿಲ ಕುಮಾರ್ ಜಿ ವಂದಿಸಿದರು

    Share This
    300x250 AD
    300x250 AD
    300x250 AD
    Back to top