ಸಿದ್ದಾಪುರ: ಸಾರ್ವಜನಿಕ ಆಸ್ಪತ್ರೆ ಸಿದ್ದಾಪುರ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ದಾಪುರ ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚಾರಣೆಯ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯತು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಲಕ್ಷ್ಮಿಕಾಂತ್ ಎನ್ ನಾಯ್ಕ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಉಡುಪ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುಮಾರ್ ನಾಯ್ಕ, ಶಿಕ್ಷಣ ಇಲಾಖೆಯ ಮಹೇಶ್ ಹೆಗಡೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಡಾ.ಲಕ್ಷ್ಮಿಕಾಂತ್ ಎನ್ ನಾಯ್ಕ ಮಾತನಾಡಿ ಜಾಗೃತಿ ಹೊಂದಿರುವುದೊಂದೇ ಹೆಚ್‍ಐವಿ ಯಿಂದ ಪಾರಾಗುವ ಉತ್ತಮ ಮಾರ್ಗವೆಂದು ಹಾಗೂ ನಮ್ಮ ತಾಲೂಕಿನಲ್ಲಿರುವ ಸೊಂಕಿತರ ಕುರಿತು ಹೇಳಿದರು.
ಡಾ.ಸ್ಪೂರ್ತಿ ಮಾತನಾಡಿ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯರು ತಪ್ಪದೇ ಹೆಚ್‍ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಒಂದು ವೇಳೆ ಗರ್ಭಿಣಿ ಸೋಂಕಿಗೆ ಒಳಗಾಗಿರುವುದು ಪತ್ತೆಯಾದರೂ ಸಹಾ ಆರೋಗ್ಯವಂತ ಮಗುವಿನ ಜನನಕ್ಕೆ ಅವಕಾಶ ಮಾಡಿಕೊಡಬಹುದೆಂದು ಹೇಳಿದರು.
ಸಿದ್ದಾಪುರ ಬಸ್ ನಿಲ್ಧಾಣ, ಆಟೋ ಸ್ಟಾಂಡ್, ಮಾರುಕಟ್ಡೆ ಹಾಗೂ ಜನ ಸಂದಣಿ ಪ್ರದೇಶಗಳಲ್ಲಿ ಜಾಥಾ ಮಾಡುವುದರ ಮೂಲಕ ಸುಮಾರು 500 ಜನರಿಗೆ ಮಾಹಿತಿ ಪತ್ರಗಳನ್ನು ವಿತರಿಸಿ ಮಾಹಿತಿ ನೀಡಲಾಯ್ತು. ಕಾರ್ಯಕ್ರಮವನ್ನು ಜಗದೀಶ್ ನಾಯ್ಕ ಆಪ್ತ ಸಮಾಲೋಚಕರು ಆಯೋಜಿಸಿದ್ದು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ್ ಕುಮಾರ್.ಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಆಸ್ಪತ್ರೆಯ ವೈದ್ಯರು, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ನೌಕರರು, ಆಶಾ ಕಾರ್ಯಕರ್ತೆಯರು,
ಆಸ್ಪತ್ರೆಯ ಐಸಿಟಿಸಿ ಹಾಗೂ ಎಆರ್‍ಟಿ, ಡಿಎಮ್‍ಸಿ ವಿಭಾಗದ ಎಲ್ಲಾ ಸಿಬ್ಬಂದಿಗಳು ಹಾಗೂ ಎನ್‍ಜಿಒ ದವರು ಕಾರ್ಯಕರ್ತರಾಗಿ ಭಾಗವಹಿಸಿದ್ದರು.