• Slide
    Slide
    Slide
    previous arrow
    next arrow
  • ಡಿ.4ಕ್ಕೆ ಭಗವದ್ಗೀತಾ ಸ್ಪರ್ಧೆ

    300x250 AD

    ಯಲ್ಲಾಪುರ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ನಿರ್ದೇಶನದಂತೆ ಪ್ರಸಕ್ತ ಸಾಲಿನ ಭಗವದ್ಗೀತಾ ಅಭಿಯಾನ ತಾಲೂಕಿನ ಬಹುತೇಕ ದೇವಸ್ಥಾನ, ಶಾಲೆಗಳಲ್ಲಿ ನಡೆಯುತ್ತಿದೆ. ತನ್ನಿಮಿತ್ತ ಡಿ.4 ರಂದು ಶನಿವಾರ 9.30 ಗಂಟೆಗೆ ಪಟ್ಟಣದ ನಾಯಕನಕೆರೆಯ ಶ್ರೀಶಾರದಾಂಬಾ ವೇದ-ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ ತಾಲೂಕಾ ಮಟ್ಟದ ಗೀತಾ ಸ್ಪರ್ಧೆ ನಡೆಯಲಿದೆ ಎಂದು ಭಗವದ್ಗೀತಾ ಸಮಿತಿ ತಾಲೂಕಾಧ್ಯಕ್ಷ ಎಸ್.ಎಲ್.ಜಾಲಿಸತ್ಗಿ ಹೇಳಿದ್ದಾರೆ.


    ಹಿರಿಯ ಪ್ರಾಥಮಿಕ ಶಾಲಾ 5, 6, 7 ತರಗತಿಗೆ ಮತ್ತು 8, 9, 10 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ 3 ನೇಯ ಅಧ್ಯಾಯ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.

    300x250 AD


    3 ನೇಯ ಅಧ್ಯಾಯ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಅಧ್ಯಾಯದ ಸಂಪೂರ್ಣ ಕಂಠಪಾಠ ಬರಬೇಕು. 5 ನಿಮಿಷ ಮಾತ್ರ ಸಮಯಮಿತಿ ಇಡಲಾಗಿದೆ. ಜಿಲ್ಲಾಮಟ್ಟದ ಸ್ಪರ್ಧೆ ಡಿ.11, ಹಾಗೂ ರಾಜ್ಯಮಟ್ಟದ ಸ್ಪರ್ಧೆ ಡಿ.19 ರಂದು ನಡೆಯಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top