Slide
Slide
Slide
previous arrow
next arrow

ಬೇಳೆಕಟ್ಟು ಸಾರು ಮಾಡಿ ಸವಿದು ನೋಡಿ

300x250 AD

ಅಡುಗೆ ಮನೆ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು, ಅದಕ್ಕೆ 1 ಚಮಚ ಎಣ್ಣೆ ಹಾಕಿ, ನಂತರ ಅದಕ್ಕೆ 4 ಒಣಮೆಣಸಿನಕಾಯಿ, ಟೀ ಸ್ಪೂನ್ ಕಾಳು ಮೆಣಸು, 1 ಟೀ ಸ್ಪೂನ್ ಜೀರಿಗೆ ಹಾಕಿ ತುಸು ಟ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 4 ಎಸಳು ಬೆಳ್ಳುಳ್ಳಿ, 1 ಈರುಳ್ಳಿ ಕತ್ತರಿಸಿದ್ದು ಹಾಕಿ ಹಾಗೇ 1 ಟೊಮೆಟೊ, 5 ಎಸಳು ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೊಮ್ಮೆ ಬಾಡಿಸಿಕೊಳ್ಳಿ. ಇದಕ್ಕೆ 1 ಚಮಚ ಸಾಂಬಾರು ಪುಡಿ ಕೂಡ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.
ಗ್ಯಾಸ್ ಮೇಲೆ ಸಾರು ಮಾಡುವ ಪಾತ್ರೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ನಂತರ ¾ ಟೀ ಸ್ಪೂನ್ ಸಾಸಿವೆ, ಸ್ವಲ್ಪ ಕರಿಬೇವು 1 ಒಣ ಮೆಣಶಿನಕಾಯಿಯನ್ನು ಕತ್ತರಿಸಿ ಹಾಕಿ, ಇದಕ್ಕೆ 2 ಟೇಬಲ್ ಸ್ಪೂನ್ ನಷ್ಟು ಹುಣಸೆಹಣ್ಣಿನ ರಸ ಸೇರಿಸಿ 2 ನಿಮಿಷಗಳ ಕಾಲ ಕುದಿಸಿ ನಂತರ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬೇಳೆ ಬೇಯಿಸಿಟ್ಟುಕೊಂಡ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿಕೊಂಡರೆ ರುಚಿಕರವಾದ ಬೇಳೆ ಕಟ್ಟಿನ ಸಾರು ಸವಿಯಲು ಸಿದ್ಧ.

300x250 AD
Share This
300x250 AD
300x250 AD
300x250 AD
Back to top