• first
    second
    third
    previous arrow
    next arrow
  • ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ ! ಇಲ್ಲಿದೆ ಮಾಹಿತಿ

    300x250 AD

    ಅಡಿಕೆ ತೋಟದಲ್ಲಿ ಕಾಫಿ ಬೆಳೆಯ ಅನುಕೂಲಗಳು: 
    ಕಾಫಿ ತಾಯಿ ಬೇರುಳ್ಳ ಸಸ್ಯವಾಗಿರುವುದರಿಂದ ಅಡಿಕೆ ಮತ್ತು ಕಾಳುಮೆಣಸುಗಳ ನಡುವೆ ಅವುಗಳಿಗೆ ಪೂರಕವಾಗಿ ಬೆಳೆಯತ್ತದೆ. ತೋಟದಲ್ಲಿ ಕಳೆ ನಿಯಂತ್ರಣ ಮಾಡುತ್ತದೆ. ಎಲೆ ಉದುರಿಸುವುದರಿಂದ ಮುಚ್ಚಿಗೆ ಮಾಡಿದಂತಾಗುತ್ತದೆ. ಮಳೆಯ ಹನಿಗಳು ನೇರವಾಗಿ ನೆಲಕ್ಕೆ ಬಿದ್ದು ಕಾಳು ಮೆಣಸಿನ ಬೇರುಗಳಿಗೆ ಆಗುವ ತೊಂದರೆ ನಿವಾರಿಸುತ್ತದೆ. ಮೂರನೇ ವರ್ಷದಿಂದ ಫಸಲು ಪ್ರಾರಂಭವಾಗುತ್ತದೆ. ಒಂದು ಎಕರೆ ಕಾಫಿಯ ಉಪಬೆಳೆಯಿಂದ ಅಡಿಕೆ ತೋಟದಲ್ಲಿ 70 ಸಾವಿರದಿಂದ 1 ಲಕ್ಷದವರೆಗೆ  ಆದಾಯ ನಿರೀಕ್ಷಿಸಬಹುದು. ನೀರಾವರಿ ವ್ಯವಸ್ಥೆಯಿದ್ದಲ್ಲಿ (ಡ್ರಿಪ್ ಅಥವಾ ಸ್ಪಿಂಕ್ಲರ್) ಇನ್ನೂ ಹೆಚ್ಚಿನ ಆದಾಯ ನಿರೀಕ್ಷಿಸಬಹುದು. ನುರಿತ ಕೆಲಸಗಾರರ ಅವಶ್ಯಕತೆ ಇರುವುದಿಲ್ಲ. ಕೊಯ್ಲೋತ್ತರ ಸಂಸ್ಕರಣೆ ಸುಲಭ (ಹಣ್ಣನ್ನು ಒಣಗಿಸಿದರಾಯಿತು).

    ಅಡಿಕೆ ತೋಟದಲ್ಲಿ ಕಾಫಿ ಬೆಳೆಯನ್ನು ಬೆಳೆಯುವ ವಿಧಾನ:

    300x250 AD

    ಸೂಕ್ತ ತಳಿ: ಚಂದ್ರಗಿರಿ. ಸಸಿಗಳು : 500 ಪ್ರತಿ ಎಕರೆಗೆ > ಸಸಿಗಳ ನಡುವೆ ಅಂತರ; 9’ (ಅಡಿಕೆ ಮರದ ಸಾಲಿನಲ್ಲಿ) > ನೆಡುವ ಸಮಯ: ಜೂನ್ ಅಥವಾ ಸಪ್ಟೆಂಬರ > ನೆಡುವ ಪದ್ಧತಿ: 45 ಸೆಂ. ಮೀ. ಉದ್ದ, ಅಗಲ ಮತ್ತು ಆಳ ಇರುವ ಕುಳಿಯಲ್ಲಿ 150ಗ್ರಾಂ ರಾಕ್ ಫಾಸ್‍ಫೇಟ್  1/2 ಕಿಲೋ ಸಾವಯವ ಗೊಬ್ಬರ ಮಿಶ್ರಣ ತುಂಬಿ ನೆಡುವುದು. 
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  9449628385 
    ಮಾಹಿತಿ ಕೃಪೆ: ಟಿ.ಎಮ್.ಎಸ್, ಶಿರಸಿ

    Share This
    300x250 AD
    300x250 AD
    300x250 AD
    Leaderboard Ad
    Back to top