ನವದೆಹಲಿ: ಭಾರತದ ಒಟ್ಟು ದೇಶೀಯ ಉತ್ಪನ್ನ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ದಾಖಲಿಸಿದೆ.
ನಿನ್ನೆ ಬಿಡುಗಡೆಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶದ ಜಿಡಿಪಿ ಶೇಕಡಾ 8.4 ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಓSಔಮಾಹಿತಿಯ ಪ್ರಕಾರ, ಈ ಅವಧಿಯಲ್ಲಿ ಉತ್ಪಾದನೆ ಶೇ.5.5ರಷ್ಟು ಹೆಚ್ಚಾಗಿದೆ. ಎರಡನೇ ತ್ರೈಮಾಸಿಕದಲ್ಲಿ ನಿರ್ಮಾಣ ವಿಭಾಗವು ಶೇ.7.5 ರಷ್ಟು ಬೆಳೆದಿದೆ.
ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯ ಹೊರತಾಗಿಯೂ FY22 ರ ಎರಡನೇ ತ್ರೈಮಾಸಿಕದಲ್ಲಿ, ಜುಲೈ-ಸೆಪ್ಟೆಂಬರ್‍ನಲ್ಲಿ ಮನೆ ಬಳಕೆಗಳ ಬೇಡಿಕೆ ಏರಿದೆ ಎಂದು NSO ಡೇಟಾ ಸೂಚಿಸುತ್ತದೆ. ಮುಂದಿನ ತಿಂಗಳುಗಳಲ್ಲಿ ಗ್ರಾಹಕರ ಬೇಡಿಕೆಯಲ್ಲಿ ತ್ವರಿತ ಚೇತರಿಕೆಯ ಭರವಸೆಯನ್ನು ಇದು ಹೆಚ್ಚಿಸಿದೆ. ಕೊರೋನಾವೈರಸ್-ಸಂಬಂಧಿತ ಅಡೆತಡೆಗಳ ನಂತರ ಆರ್ಥಿಕತೆಯಲ್ಲಿ ಬೇಡಿಕೆ ಕ್ರಮೇಣ ಸಹಜ ಸ್ಥಿತಿಗೆ ಬಂದ ಕಾರಣ ದೇಶದ ಆರ್ಥಿಕತೆಯು ತ್ರೈಮಾಸಿಕದಲ್ಲಿ ವೇಗವನ್ನು ಪಡೆದುಕೊಂಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಆರ್ಥಿಕತೆಯು ಶೇ.7.5ರಷ್ಟು ಕುಸಿದಿತ್ತು.
ನ್ಯೂಸ್ 13