• Slide
  Slide
  Slide
  previous arrow
  next arrow
 • ಸಹಾಯ ಧನದ ಚೆಕ್ ವಿತರಿಸಿದ ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ

  300x250 AD

  ಶಿರಸಿ: ಕೋವಿಡ್-19 ನಿಂದ ಮೃತನಾದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಗೆ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದಿಂದ ಪರಿಹಾರದ ಚೆಕ್ ವಿತರಣೆ ಧಾರವಾಡ ಹಾಲು ಒಕ್ಕೂಟದ ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕಲ್ಯಾಣ ಸಂಘದ ವತಿಯಿಂದ ನೇರ್ಲವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ರಮಾಕಾಂತ ಹೆಗಡೆ ಇವರು ಕೋವಿಡ್-19 ಸೋಂಕಿನಿಂದ ಮರಣ ಹೊಂದಿದ ಕಾರಣ ಸಹಾಯ ಧನವಾಗಿ ರೂ.50,000 ಗಳ ಮೊತ್ತದ ಚೆಕ್’ನ್ನು ಮೃತ ರಮಾಕಾಂತ ಹೆಗಡೆ ಅವರ ಸಹೋದರರಾದ ಚಂದ್ರಕಾಂತ ಹೆಗಡೆ ಇವರಿಗೆ ಧಾರವಾಡ ಹಾಲು ಒಕ್ಕೂಟದ ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಧಾರವಾಡ ಹಾಲು ಒಕ್ಕೂಟದ ಮತ್ತು ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಕೆ ಹೆಗಡೆ ಕೆಶಿನ್ಮನೆ ಅವರು ವಿತರಿಸಿದರು.

  300x250 AD


  ಧಾರವಾಡ ಹಾಲು ಒಕ್ಕೂಟದ 4 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟೂ 5 ಜನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳು ಕೋವಿಡ್-19 ಸೋಂಕು ತಗಲಿ ಮೃತ ಪಟ್ಟಿದ್ದು, ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೇರ್ಲವಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ರಮಾಕಾಂತ ಹೆಗಡೆಯವರು ಒಬ್ಬರಾಗಿದ್ದರು.
  ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಮಾರುಕಟ್ಟೆ ಅಧಿಕಾರಿಯಾದ ಬಸವರಾಜ ಸಲೋನಿ, ಪಶು ವೈದ್ಯಾಧಿಕಾರಿಗಳಾದ ಡಾ. ರಾಕೇಶ ತಲ್ಲೂರ್ ಶಿರಸಿ ಉಪ ವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕರುಗಳಾದ ದಯಾನಂದ ಬೋರ್ಕರ್, ಅಭಿಷೇಕ ನಾಯ್ಕ ಹಾಗೂ ಜಯಂತ ಪಟಗಾರ ಇವರುಗಳು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top