ಯಲ್ಲಾಪುರ: ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ದೀಪೋತ್ಸವ ನಡೆಯಿತು.
ದೇವಾಲಯದ ಆವಾರದಲ್ಲಿ ವಿಶೇಷವಾದ ಹೂವಿನ ಅಲಂಕಾರ ಮಾಡಲಾಗಿತ್ತು. ದೇವರಿಗೆ ಮಾಡಿದ ವಿಶೇಷ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ದೇವಾಲಯದ ಆವಾರದಲ್ಲಿ ದೀಪಗಳನ್ನು ಬೆಳಗಿ ದೀಪೋತ್ಸವ ಆಚರಿಸಲಾಯಿತು
ನೂರಾರು ಭಕ್ತರು ಆಗಮಿಸು, ಬಸವೇಶ್ವರ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ, ಕಾರ್ತೀಕ ಉತ್ಸವದಲ್ಲಿ ಭಾಗಿಯಾದರು.