ಮುಂಡಗೋಡ: ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಿ ಹೆಚ್ಚಿನ ಅಂಕ ಗಳಿಸಿ ಶಾಲೆಯ ಮತ್ತು ತಂದೆ-ತಾಯಿಗಳ ಹೆಸರು ತರಬೇಕು ಎಂದು ಸಿಪಿಐ ಎಸ್.ಎಸ್.ಸಿಮಾನಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ರೋಟರಿ ಪ್ರೌಢಶಾಲೆ ಹಾಗೂ ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕುರಿತು ಅವರು ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿದ್ದು
ವಿದ್ಯಾರ್ಥಿಗಳು ಅವುಗಳಿಗೆಲ್ಲ ಗಮನ ಕೊಡಬಾರದು ಎಂದರು. ಪಿಎಸ್‌ಐ ನಿಂಗಪ್ಪ ಜಕ್ಕಣ್ಣವರ ಹಾಗೂ ಎಎಸ್‌ಐ ಮಣಿಮಾಲನ್ ಪೊಲೀಸ್ ಠಾಣೆಯಲ್ಲಿ ಬಂದೂಕು, ಬಂದಿಖಾನೆ ಹಾಗೂ ಸಿಬ್ಬಂದಿಯ ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಿಕ್ಷಕ ಮಧುಕರ ನಾಯ್ಕ, ಪಿ.ಎಫ್.ಮೊರಬದ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.