• Slide
    Slide
    Slide
    previous arrow
    next arrow
  • ಹಿರಿಯ ಪತ್ರಕರ್ತ ರವೀಂದ್ರ ಬಳಗುಳಿ ನಿಧನ

    300x250 AD


    ಸಿದ್ದಾಪುರ: ಹಿರಿಯ ಪತ್ರಕರ್ತ, ಬರೆಹಗಾರ, ವಕೀಲ ರವೀಂದ್ರ ಭಟ್ ಬಳಗುಳಿ (58) ಕೆಲವು ಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರು ಪತ್ನಿ, ಓರ್ವ ಪುತ್ರ, ತಾಯಿ, ಸಹೋದರ ಹಿರಿಯ ಪತ್ರಕರ್ತ ಶಶಿಧರ ಭಟ್ ಹಾಗೂ ಅಪಾರ ಬಂಧು-ಬಳಗ, ಆತ್ಮೀಯರನ್ನು ಅಗಲಿದ್ದಾರೆ.


    ಜನಮಾಧ್ಯಮ, ನಂತರ ಪ್ರಜಾವಾಣಿ ದಿನಪತ್ರಿಕೆಗಳಲ್ಲಿ ಸುದೀರ್ಘ ಕಾಲದಿಂದ ಸ್ಥಳೀಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದ ರವೀಂದ್ರ ಭಟ್ ಕವಿತೆ, ಸಣ್ಣ ಕಥೆ ಪ್ರಾಕಾರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದರು. ಹೆಸರಾಂತ ನಾಟಕಕಾರ, ಸಾಮಾಜಿಕ ಕಾರ್ಯಕರ್ತ ದಿ|ವಿ.ಜಿ.ಭಟ್ಟರ ಮಗನಾಗಿ ತಂದೆಯ ಬದ್ದತೆ, ಆದರ್ಶಗಳನ್ನು ಮುಂದುವರಿಸಿಕೊಂಡು ಬಂದಿದ್ದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಮಘೇಗಾರಿನ ಶ್ರೀ ಮಹಾಗಣಪತಿ ದೇವಾಲಯದ ಮೊಕ್ತೇಸರನಾಗಿ ಕಾರ್ಯನಿರ್ವಹಿಸಿದ್ದ ಅವರು ವಕೀಲ ವೃತ್ತಿಯಲ್ಲೂ ಉತ್ತಮ ಹೆಸರನ್ನು ಗಳಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top