ಶಿರಸಿ: ಕಾಲೇಜಿನ ಸ್ವಾಸ್ಥ್ಯ ಹಾಳುಮಾಡುವ ಕೆಲಸದಲ್ಲಿ ಭಾಗಿಯಾದ ವಿದ್ಯಾರ್ಥಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂ.ಎಂ ಕಲಾ ಮತ್ತು ವಾಣಿಜ್ಯ ವಿದ್ಯಾಲಯದ ವಿದ್ಯಾರ್ಥಿಗಳು ಮನವಿ ಮಾಡಿದರು.
ಕೆಲ ದಿನಗಳ ಹಿಂದೆ ವಿದ್ಯಾಲಯದ ವಿದ್ಯಾರ್ಥಿ ಜಾಫರ್ ನಗರದ ಎಂ ಇ ಎಸ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಯನ್ನು ಪೀಡಿಸುತ್ತಿರುವ ಬಗ್ಗೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ ಈ ಹಿಂದೆ ಶಿಕ್ಷಕಿಯರೊಂದಿಗೂ ಅಸಭ್ಯವಾಗಿ ವರ್ತಿಸಿದ್ದ. ಅಲ್ಲದೇ ಆನ್ ಲೈನ್ ಕ್ಲಾಸ್ ನಡೆಯುವ ವೇಳೆ ಹಲವು ವಿದ್ಯಾರ್ಥಿನಿರ ಮೊಬೈಲ್ ಗೆ ಅಸಭ್ಯವಾಗಿ ಮೆಸೆಜ್ ಮಾಡುತ್ತಿದ್ದ. ಇಂಥವರಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಕಾರಣ ಈತನ ವಿರುದ್ಧ ಕಠಿಣಕ್ರಮಕ್ಕೆ ಮುಂದಾಗಬೇಕು ಎಂದು ಕಾಲೇಜಿನ 300 ಕ್ಕೂ ಅಧಿಕವಿದ್ಯಾರ್ಥಿಗಳು ಪ್ರಾಚಾರ್ಯರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.