• Slide
    Slide
    Slide
    previous arrow
    next arrow
  • ಬೆಲೆ ಏರಿಕೆ ವಿರುದ್ಧ ಮಹಿಳಾ ಮತದಾರರು ಕಾಂಗ್ರೇಸ್ ಪರ; ಭೀಮಣ್ಣ ಗೆಲುವು ನಿಶ್ಚಿತ; ರವೀಂದ್ರ ನಾಯ್ಕ

    300x250 AD

    ಸಿದ್ಧಾಪುರ:ಜಿಲ್ಲೆಯಲ್ಲಿನ ಮತದಾರರಲ್ಲಿ ಅರ್ಧದಷ್ಟು ಮಹಿಳಾ ಮತದಾರರೇ ಇರುವುದರಿಂದ, ಕೇಂದ್ರ ಮತ್ತು ರಾಜ್ಯ ಸರಕಾರದ ಬೆಲೆ ಏರಿಕೆ ನೀತಿಯ ವಿರೋಧವಾಗಿ ಮಹಿಳಾ ಮತದಾರರು ಮತ ಚಲಾಯಿಸುವ ಮನೋಭಾವನೆ ಹೊಂದಿರುವದರಿಂದ ಮುಂಬರುವ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲವು ನಿಶ್ಚಯವಾಗಿದೆ ಎಂದು ಕಾಂಗ್ರೇಸ್ ಧುರೀಣ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ದಿನದಿಂದ ದಿನಕ್ಕೆ, ಕೇಂದ್ರ ಮತ್ತು ರಾಜ್ಯ ಸರಕಾರ ಬೆಲೆ ಏರಿಕೆ ನೀತಿಯು ಜನಸಾಮಾನ್ಯರ ಜೀವನಕ್ಕೆ ಮಾರಕವಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ. ಈ ದಿಶೆಯಲ್ಲಿ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಚುನಾವಣೆ ಕಾಂಗ್ರೇಸ್ ಪಕ್ಷದ ಪರ ಫಲಿತಾಂಶ ಬರುವದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.

    300x250 AD

    ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವುದರಿಂದ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಬ್ಬರದ ಪ್ರಚಾರ ಜರುಗಿಸುತ್ತಿದ್ದು, ಕಾಂಗ್ರೇಸ್ ಪಕ್ಷವು ಸಮರ್ಥವಾಗಿ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಚುನಾವಣೆ ಎದುರಿಸಲಿದೆ ಎಂದು ಅವರು ತಿಳಿಸಿದ್ದರು.

    ಕಾಂಗ್ರೇಸ್: ಪಂಚಾಯತ ರಾಜ್ ಪರ: ಪಂಚಾಯತ ರಾಜ್ ವ್ಯವಸ್ಥೆಯ ಪರವಾಗಿ ಕಾಂಗ್ರೇಸ್ ಪಕ್ಷವಿದ್ದು ಇಂದಿನ ರಾಜ್ಯ ಸರಕಾರ ಜಿಲ್ಲೆ ಮತ್ತು ತಾಲೂಕ ಪಂಚಾಯತ ಚುನಾವಣೆ ಮುಂದುಡಿರುವುದನ್ನು ಬಲವಾಗಿ ಖಂಡಿಸುತ್ತಾ, ಬಿಜೆಪಿ ಸರಕಾರ ಪಂಚಾಯತ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top