ಕಾರವಾರ: ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಸೋಮವಾರ ಬಿಜೆಪಿ ಕಾರವಾರ ನಗರ ಮಂಡಲದ ವತಿಯಿಂದ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಪರ ವಾರ್ಡ್ ನಂಬರ್ 10, 13, 19, ಹಾಗೂ 22 ರಲ್ಲಿ ನಗರಸಭೆ ಚುನಾಯಿತ ಜನಪ್ರತಿನಿಧಿಗಳ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು.
ಸದಸ್ಯರ ಜೊತೆಗೆ ಸಭೆ ನಡೆಸಿ, ಚುನಾವಣಾ ಕಾರ್ಯತಂತ್ರಗಳ ಕುರಿತು ಚರ್ಚಿಸಿ, ಗಣಪತಿ ಉಳ್ವೇಕರ್ ಅವರ ಪರವಾಗಿ ಮತಯಾಚಿಸಿದರು. ಈ ಸಂದರ್ಭದಲ್ಲಿ ನಗರಸಭೆಅಧ್ಯಕ್ಷಡಾ ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ್ ಪಿ. ನಾಯ್ಕ, ಚೇರ್ಮನ್ ಸಂಧ್ಯಾ ಬಾಡ್ಕರ್, ಮಂಡಲಾಧ್ಯಕ್ಷ ನಾಗೇಶ್‍ಕುರ್ಡೇಕರ್, ಜಿಲ್ಲಾ ಮಾಧ್ಯಮ ವಕ್ತಾರರು ನಾಗರಾಜ ನಾಯಕ, ಜಿಲ್ಲಾ ಪ್ರಭಾರಿಆರತಿಗೌಡ, ಪ್ರಧಾನ ಕಾರ್ಯದರ್ಶಿ ಪ್ರದೀಪ ಗುನಗಿ, ಹನುಮಂತ ತಳವಾರ್ ಹಾಗೂ ಶಕ್ತಿ ಕೇಂದ್ರಅಧ್ಯಕ್ಷರು ಉಪಸ್ಥಿತರಿದ್ದರು.