• Slide
    Slide
    Slide
    previous arrow
    next arrow
  • ಡಿ. 6ಕ್ಕೆ ಜಿಲ್ಲಾ ಮಟ್ಟದ ಯುವಜನೋತ್ಸವ

    300x250 AD

    ಕಾರವಾರ: ನೆಹರು ಯುವಕ ಕೇಂದ್ರ, ಎನ್‍ಎಸ್‍ಎಸ್ ಮತ್ತು ಜಿಲ್ಲಾ ಯುವ ಒಕ್ಕೂಟ ಇವರ ಸಹಯೋಗದಲ್ಲಿ ಜಿಲ್ಲಾಯುವ ಸಬಲೀಕರಣ ಇಲಾಖೆಯು 2021-22 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಸಂಘಟಿಸಿದೆ.


    ಜನಪದ ನೃತ್ಯ, ಜನಪದಗೀತೆ, ಏಕಾಂಕ ನಾಟಕ, ಶಾಸ್ತ್ರೀಯ ಗಾಯನ:(ಹಿಂದುಸ್ತಾನಿ ಮತ್ತುಕರ್ನಾಟಕ ಶೈಲಿ) ಶಾಸ್ತ್ರೀಯ ವಾದನ( ಸಿತಾರ್, ಕೊಳಲು, ತಬಲಾ, ವೀಣೆ, ಮೃದಂಗ) ಹಾರ್ಮೋನಿಯಂ(ಲಘು), ಗೀಟಾರ್, ಶಾಸ್ತ್ರೀಯ ನೃತ್ಯ (ಮಣಿಪುರಿ, ಒಡಿಸ್ಸಿ, ಕಥಕ್, ಕೂಚಿಪುಡಿ, ಭರತನಾಟ್ಯ)ಆಶುಭಾಷಣದಂತಹ ಸ್ಫರ್ಧೆಗಳು ಯುವಜನೋತ್ಸವದಲ್ಲಿ ನಡೆಯಲಿವೆ.

    ಈ ಸ್ಪರ್ಧೆಗಳಲ್ಲಿ ಜಿಲ್ಲೆಯ ಯುವಕ-ಯುವತಿಯರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿರುತ್ತದೆ. ಭಾಗವಹಿಸುವವರ ವಯೋಮಿತಿಯು 15 ರಿಂದ 29 ವರ್ಷದೊಳಗಿರಬೇಕು ಹಾಗೂ ವಯೋಮಿತಿಯ ಬಗ್ಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಪ್ರತಿ ಶಾಲಾ ವರ್ಗಾವಣೆಯ ದೃಢೀಕರಣ ಪತ್ರದ ಪ್ರತಿ ಅಥವಾ ಶಾಲೆಯಿಂದ ಹುಟ್ಟಿದ ದಿನಾಂಕದದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರುವುದು. ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿಲ್ಲ.

    300x250 AD

    ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಳಿಗ್ಗೆ 9.30 ಗಂಟೆ ಒಳಗೆ ಸಂಘಟಕರಲ್ಲಿ ವರದಿ ಮಾಡಿಕೊಳ್ಳುವುದು ಹಾಗೂ ಕೋವಿಡ್ 19 ಪ್ರಯುಕ್ತ 72 ಗಂಟೆಗಳ ಅವಧಿಯೊಳಗೆ ಆರ್‍ಪಿಟಿಸಿಆರ್ ಟೆಸ್ಟ್ ವರದಿ ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ.

    ಜಿಲ್ಲಾ ಮಟ್ಟದಯುವಜನೋತ್ಸವಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಿಂದಯುವಕ, ಯುವತಿಯರು ಭಾಗವಹಿಸಿ, ಜಿಲ್ಲೆಯ ಸಾಂಸ್ಕೃತಿಕ ಕಲೆಯನ್ನು ತಾಲೂಕಿನಾದ್ಯಂತ ಪ್ರಚಾರಪಡಿಸಲು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top