ಕಾರವಾರ: ತಾಲೂಕಿನ ತೋಡುರು ಪಂಚಾಯತ ಜ್ವಾಲನಮಡಿ ಬೆಟ್ಟದ ಹರಿಯುವ ಹಳ್ಳದಲ್ಲಿನ ಕಲ್ಲು ಬಂಡೆಯಲ್ಲಿ ಅಪರಿಚಿತ ಪುರುಷನ ಮೃತ ದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯು ದುಂಡು ಮುಖ, ಗೋದಿ ಮೈ ಬಣ್ಣ ಸಾಧಾರಣ ಮೈಕಟ್ಟು, ಸುಮಾರು 5.6 ಎತ್ತರ ಇದ್ದು, ಅಂದಾಜು 40 ರಿಂದ 50 ವರ್ಷ ವಯಸ್ಸಾಗಿರಬಹುದು. ಬಲ ಕೈಯಲ್ಲಿ ಪಿ.ಕೆ.ಮಹೀಮ ಅಂತಾ ಹಚ್ಚೆ ಹಾಕಿದ್ದಿರುತ್ತದೆ. ಅಚ್ಚ ನೀಲಿ ಬಣ್ಣದಅರ್ಧ ತೋಳಿನ ಟಿ.ಶರ್ಟ್ ಹಾಗೂ ಟ್ಯ್ರಾಕ್ ಪ್ಯಾಂಟ್ ಧರಿಸಿರುತ್ತಾನೆ. ಸ್ಥಳದಲ್ಲಿ ಟೈಮೆಕ್ಸ್‍ಕಂಪನಿಯ ಕೈ ಗಡಿಯಾರ ತುಂಡಾಗಿ ಬಿದ್ದಿರುತ್ತದೆ.
ಈ ಮೇಲೆ ನಮೂದಿಸಿದ ಚಹರೆಯ ಮೃತ ಅಪರಿಚಿತ ವ್ಯಕ್ತಿಯ ಹೆಸರು, ವಿಳಾಸ, ಸಂಬಂಧಿಕರು ಪತ್ತೆಯಾದಲ್ಲಿ ಕಾರವಾರ ಗ್ರಾಮೀಣ ಪೊಲೀಸ್‍ಠಾಣಾ ದೂರವಾಣಿ ಸಂಖ್ಯೆ: 08382-222443, ಮೊ: 9480805262 ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 08382-22655ಗೆ ಸಂಪರ್ಕಿಸಲುಕೋರಿದೆ.