ಕಾರವಾರ: ಯುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಪರೀಕ್ಷೆಯಲ್ಲಿ ಯಶಸ್ಸನ್ನು ಹೇಗೆ ಸಾಧನೆ, ಹೇಗೆ ಪ್ರೇರಣೆ ಹಾಗೂ ಪರೀಕ್ಷೆಯಲ್ಲಿ ಉತ್ತರ ಬರೆಯುವುದರ ಬಗ್ಗೆ ಲಾಯನ್ಸ್ ಕ್ಲಬ್ ಕಾರವಾರ, ಲಾಯನ್ಸ್ ಹಾಗೂ ಲಿಯೋ ಕ್ಲಬ್ ಕಾಣಕೋಣ ಇವರ ಸಹಯೋಗದಲ್ಲಿ ಇಲ್ಲಿನ ಸೇಂಟ್ ಮೈಕಲ್ ಕಾನ್ವೆಂಟ್ ಹೈಸ್ಕೂಲಿನ 8,9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ
ಮಾಹಿತಿ ಕಾಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಕಾಣಕೋಣ ಕ್ಲಬ್ಬಿನ ಲಾಯನ್ ವಿಡ್ರಿಯನ್ ಟೋರೆಸ್ ಹಲವು ವಿಷಯದ ಬಗ್ಗೆ ಮಾತನಾಡಿದರು. ಸೇಂಟ್ ಮೈಕಲ್ ಕಾನ್ವೆಂಟಿನ ಮುಖ್ಯಾಧ್ಯಾಪಕಿ ಸಿಸ್ಟರ್ ಕ್ರಿಸ್ಟಿನಾ ಜೋಸೆಫ್, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾಣಕೋಣ ಲಾಯನ್ಸ್ ಕ್ಬಬ್ಬಿನ ಅಧ್ಯಕ್ಷ ಪೆಟ್ರಿಸಿಯಾ ಟೋರೆಸ, ಲಿಯೋ ಕ್ಲಬ್ಬಿನ ಸದಸ್ಯ ಅರಿಸ್ಟರ ಟೋರೆಸ ಹಾಜರಿದ್ದರು.
ಕಾರವಾರ ಲಾಯನ್ಸ್ ಕ್ಲಬ್ಬಿನ ಅಧ್ಯಕ್ಷೆ ಐಶ್ವರ್ಯ ಮಾಸೂರಕರ ಹಾಗೂ ಕ್ಲಬ್‍ನ ಸದಸ್ಯರು ಸಹಕರಿಸಿದರು.