• Slide
  Slide
  Slide
  previous arrow
  next arrow
 • ಪಕ್ಷದ ತತ್ವ ಸಿದ್ದಾಂತ-ಅಭಿವೃದ್ಧಿ ಕಾರ್ಯದಿಂದಲೇ ನಮ್ಮ ಗೆಲುವು; ವೆಂಕಟೇಶ ನಾಯಕ

  300x250 AD

  ಹೊನ್ನಾವರ: ನಮ್ಮ ಪಕ್ಷದ ತತ್ವ ಸಿದ್ದಾಂತ- ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.

  ಹೊನ್ನಾವರ ಪಟ್ಟಣದಲ್ಲಿರುವ ಶಾಸಕ ಸುನೀಲ ನಾಯ್ಕ ಅವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮೊದಲಿನಲ್ಲಿ ನಡೆದ ಚುನಾವಣೆಗಳಲ್ಲಿ ಹಿಂದುತ್ವದ ಅಲೆ, ಮೋದಿ ಅಲೆ ಗೆಲುವಿಗೆ ಕಾರಣವಾಗಿತ್ತು. ಈ ಬಾರಿ ನಡೆಯುದಿಲ್ಲ ಎಂಬ ಕಾಂಗ್ರೇಸ್ ಆರೋಪದ ಬಗ್ಗೆ ಉತ್ತರಿಸಿದರು. ಹಿಂದಿನ ಚುನಾಯಿತ ಕಾಂಗ್ರೆಸ್ ಪ್ರತಿನಿಧಿಗಳ ಅಸಮರ್ಥತೆ, ಅಭಿವೃದ್ಧಿ ಕುಂಠಿತವಾಗಿರುವುದೇ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ.


  ಈಗಾಗಲೇ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರ ಚುನಾಯಿತ ಪ್ರತಿನಿಧಿಗಳ ಸಭೆ ಮಾಡಿರುವುದರಿಂದ ಅವರ ಉತ್ಸಾಹ ನೋಡಿದಾಗ ಈ ಬಾರಿ ಬಿಜೆಪಿ ಗೆಲ್ಲುವ ಅಚಲವಾದ ವಿಶ್ವಾಸವಿದೆ. ಕಾರವಾರ ನಗರಸಭೆಗೆ ಸತತ 5 ಬಾರಿ ಗೆದ್ದು, 2 ಬಾರಿ ಅಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜನರ ಸಮಸ್ಯೆ ಆಲಿಸಿದವರನ್ನು ಪಕ್ಷ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ ಎಂದರು.

  300x250 AD

  ವಿಧಾನ ಪರಿಸಷತ್ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಮಾತನಾಡಿ, ಈ ಬಾರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರದಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವ ಸಾಧಿಸಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೇಸ್ ಸರ್ಕಾರವಿದ್ದಾಗ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅಲ್ಲದೇ 70% ದಷ್ಟು ಬಿಜೆಪಿ ಸದಸ್ಯರು ಚುನಾಯಿತರಾಗಿದ್ದಾರೆ. ಇವರೆಲ್ಲರ ಸಹಕಾರ ಹಾಗೂ ಪಕ್ಷದ ನಾಯಕರ ಸಹಕಾರದಿಂದ ಈ ಬಾರಿ ವಿಧಾನಪರಿಷತ್ ಆಯ್ಕೆಯಾಗಲಿದ್ದೇನೆ ಎಂದರು. ಮೀನುಗಾರರ ಸೌಲಭ್ಯ ನೆರೆಯ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯವರು ವಂಚಿತರಾಗುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ಮೀನುಗಾರ ಸಮಾಜದವನೇ ಆದ ನಾನು ಎಲ್ಲರನ್ನು ಒಗ್ಗೂಡಿಸಿಕೊಂಡು, ಸಮಸ್ಯೆಯನ್ನು ಆಲಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

  ಶಾಸಕ ಸುನೀಲ ನಾಯ್ಕ ಮಾತನಾಡಿ, ಮೀನುಗಾರರ ಮುಖಂಡರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಜನಮನ್ನಣೆ ಪಡೆದವರು ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. 12 ವರ್ಷದಿಂದ ಸದಸ್ಯರಾಗಿ ಆಯ್ಕೆಯಾದವರು ತಾಲೂಕಿಗೆ ಒಂದೇ ಒಂದು ಬಾರಿ ಭೇಟಿ ನೀಡಿ ಸಾತ್ವಂನ ಹೇಳುವ ಕೆಲಸ ಮಾಡಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವ ನಿರಾಶದಾಯಕ ಹೇಳಿಕೆ ನೀಡುವವರು ಕಾಂಗ್ರೇಸ್ ಪಕ್ಷದಲ್ಲಿರುವುದು ಅವರ ಸಂಸ್ಕøತಿ ತೋರಿಸುತ್ತಿದೆ. ಈ ಬಾರಿ ಇದು ನಮ್ಮ ಪಕ್ಷದ ಗೆಲುವಿಗೆ ಕಾರಣವಾಗಲಿದೆ ಎಂದರು.

  ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎನ್.ಎಸ್.ಹೆಗಡೆ ಕರ್ಕಿ, ಗೋವಿಂದ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಉಮೇಶ ನಾಯ್ಕ, ಮಂಜುನಾಥ ನಾಯ್ಕ ಗೇರುಸೊಪ್ಪ, ಗಣಪತಿ ನಾಯ್ಕ ಬಿಟಿ, ಗಣಪತಿ ಗೌಡ ಚಿತ್ತಾರ, ಸುರೇಶ ಖಾರ್ವಿ, ವಿಘ್ನೇಶ್ವರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top