ಭಟ್ಕಳ: ಇಲ್ಲಿನ ನಾಮಧಾರಿ ಸಮಾಜದ ಗುರುಮಠ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಭಜನಾ ಮಂಗಲೋತ್ಸವ ಕಾರ್ಯಕ್ರಮ ರವಿವಾರ ಸಂಪನ್ನಗೊಂಡವು.
ಸತತ 23 ದಿನಗಳ ಕಾಲ ನಗರದ ಪ್ರಮುಖ ಭಾಗಗಳಲ್ಲಿ ಭಜನಾ ಮೆರವಣಿಗೆ ಸಾಗಿ ರವಿವಾರ ರಾತ್ರಿ ಭಜನ ಮಂಗಲೋತ್ಸವ ಕಾಣುವುದರೊಂದಿಗೆ ಅತ್ಯಂತ ಯಶ್ಸಿಯಾಗಿ ಸಂಪನ್ನಗೊಂಡಿತು. ಕಾರ್ತಿಕ ಮಾಸದ ಪ್ರಯುಕ್ತ ಹಮ್ಮಿಕೊಂಡ ಭಜನಾ ಕುಣಿತದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಆರ್ಶಿಕಾನ್‍ನ ಶ್ರೀ ಯಕ್ಷದೇವತೆ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆಯಿತು. ಕಾನಮದ್ಲುವಿನ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ದ್ವಿತೀಯ, ಸೋಮೇಶ್ವರ ಶ್ರೀರಾಮ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದುಕೊಂಡರು.
ಶ್ರೀ ವೆಂಕಟೇಶ್ವರ ಭಜನ ಮಂಡಳಿ ಆಸರಕೇರಿ, ಶ್ರೀ ಮಹಾಸತಿ ಬಾಲಕರ ಭಜನ ಮಂಡಳಿ, ಕಾವುರು, ಶ್ರೀ ಜಟಕೇಶ್ವರ ಭಜನಾ ಮಂಡಳಿ ಯಲ್ವಡಿಕವೂರು ಹಾಗೂ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮಾಲೆಕೋಡ್ಲು ಸಮಾಧಾನಕರ ಬಹುಮಾನವನ್ನು ಪಡೆಯಿತು. ಬಹುಮಾನವನ್ನು ದೇವಸ್ತಾನದ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣಾ ನಾಯ್ಕ ನೀಡಿದರು. ಒಟ್ಟೂ 8 ಆಯ್ದ ಭಜನಾ ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡವು. ದೇವಸ್ಥಾನದ ಆಡಳಿತ ಮಂಡಳಿಯ ಗೋವಿಂದ ನಾಯ್ಕ, ಭವಾನಿಶಂಕರ ನಾಯ್ಕ, ಮಾಸ್ತಿ ನಾಯ್ಕ, ಗಿರೀಶ ನಾಯ್ಕ, ಗಣೇಶ ನಾಯ್ಕ, ಪ್ರಮುಖರಾದ ಶ್ರೀಧರ ನಾಯ್ಕ ಆಸರಕೇರಿ, ವಿಠ್ಠಲ್ ನಾಯ್ಕ, ಪರಮೇಶ್ವರ ನಾಯ್ಕ, ಮತ್ತಿತರರು ಇದ್ದರು.