ಹೊನ್ನಾವರ: ಫ್ರೆಂಡ್ಸ್ ಕ್ರಿಕೇಟರ್ಸ್ ಹಳದಿಪುರ ಇವರ ಆಶ್ರಯದಲ್ಲಿ ನಡೆದ ಎಚ್.ಪಿ.ಎಲ್ ಪಂದ್ಯಾವಳಿಯಲ್ಲಿ ಒಟ್ಟೂ 8 ತಂಡಗಳು ಭಾಗವಹಿಸಿದ್ದು, ಎಚ್.ಪಿ.ಎಲ್ 2021 ರ ಚಾಂಪಿಯನ್ ಪಟ್ಟವನ್ನು ಮಹಾಸತಿ ಮಣ್ಣಗದ್ದೆ ತಂಡ ಪಡೆದುಕೊಂಡಿದೆ.
ಕೋರೋನಾ ನಂತರ ಈಗ ಪಂದ್ಯಾವಳಿ ನಡೆಸಲು ಅವಕಾಶವಾಗಿದ್ದು, ಎರಡು ದಿನಗಳ ಕಾಲ ಲೀಗ್ ಮಾದರಿಯಲ್ಲಿ ಪಂದ್ಯ ನಡೆಯಿತು.
ಅಂತಿಮ ಪಂದ್ಯಾವಳಿ ರವಿ ನಾಯ್ಕ ಮಾಲಿಕತ್ವದ ಸ್ಟಾರ್ ಕ್ರಿಕೆಟರ್ಸ್ ಹಾಗೂ ಅನಂತ ಗೌಡ ಮಾಲಿಕತ್ವದ ಮಹಾಸತಿ ಮಣ್ಣಗದ್ದೆ ತಂಡದ ನಡುವೆ ಸಮಬಲದ ಹೋರಾಟದೊಂದಿಗೆ ಮಹಾಸತಿ ಮಣ್ಣಗದ್ದೆ ತಂಡ ವಿಜಯಶಾಲಿಯಾಗಿ ಚಾಂಪಿಯನ್ ಪಟ್ಟಕ್ಕೆರಿದರೆ, ಸ್ಟಾರ್ ಕ್ರಿಕೆಟರ್ ತಂಡ ರನ್ನರ್ ಅಪ್ ಆಗಿದೆ.
ಪಂದ್ಯಾವಳಿಯನ್ನು ವೀಕ್ಷಿಸಲು ಅಪಾರ ಪ್ರಮಾಣದಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದು, ಗಣ್ಯಮಾನ್ಯರು ಕೂಡಾ ಪಂದ್ಯಾವಳಿಯನ್ನು ಸವಿದರು. ಪ್ರಥಮ ಹಾಗೂ ದ್ವಿತೀಯ ಸ್ಥಾನದ ಟ್ರೋಫಿಯನ್ನು ಅಂಸಳ್ಳಿಯ ಶಂಕರ ಭಟ್ಟ ಕೊಡುಗೆ ನೀಡಿದ್ದರು.
ವಿಜೇತ ತಂಡಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಜಿತ ಮುಕುಂದ ನಾಯ್ಕ, ಜನಾರ್ದನ ನಾಯ್ಕ, ಶಂಕರ ಭಟ್ ಅಂಸಳ್ಳಿ, ರವಿ ನಾಯ್ಕ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.