ಭಟ್ಕಳ: ಹುಬ್ಬಳ್ಳಿಯಲ್ಲಿ ಶೋಟೊಕಾನ್ ಕರಾಟೆ ಡು-ಅಸೋಸಿಯೇಷನ್ ವತಿಯಿಂದ ನಡೆದ 3 ನೇಯ ರಾಷ್ಟ್ರ ಮಟ್ಟದ ಕರಾಟೆ ಓಪನ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶೋಟೋಕಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ರಾಜಶೇಖರ ಗೌಡ, ಕಟಾ ವಿಭಾಗದಲ್ಲಿ ಬ್ರೌನ್ ಬೆಲ್ಟ್ ವಿಭಾಗದ ಕರಾಟೆ ವಿದ್ಯಾರ್ಥಿಗಳಾದ ರೀಫಾ ಖಾನ್ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ತೃತೀಯ, ಮಂಜುನಾಥ ದೇವಾಡಿಗ ಕಟಾ ವಿಭಾಗದಲ್ಲಿ ದ್ವಿತೀಯ, ಕಲರ್ ಬೆಲ್ಟ್ ವಿಭಾಗದ ಕರಾಟೆ ವಿದ್ಯಾರ್ಥಿಗಳಾದ ರಿಷಿಮಾ ನಾಯ್ಕ ಕಟಾ ವಿಭಾಗದಲ್ಲಿ
ದ್ವಿತೀಯ, ಸಿಂಧು ಅರೆರ್ ಕಟಾ ವಿಭಾಗದಲ್ಲಿ ದ್ವಿತೀಯ, ನಿಧಿ ನಾಯ್ಕ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮಿತೆಯಲ್ಲಿ ಪ್ರಥಮ ರಮ್ಯ ನಾಯ್ಕ, ಆಯುಷ್ ನಾಯ್ಕ ಕಟಾ ವಿಭಾಗದಲ್ಲಿ ತೃತೀಯ ಮತ್ತು ಕುಮಿತೆಯಲ್ಲಿ ಪ್ರಥಮ, ಚೌತನಿ ಕರಾಟೆ ಕ್ಲಾಸ್‍ನ ಕಲರ್ ಬೆಲ್ಟ್ ಕರಾಟೆ ವಿದ್ಯಾರ್ಥಿಗಳಾದ ಪ್ರಾಂಜಲ್ ಮೊಗೇರ ಕಟಾ ವಿಭಾಗದಲ್ಲಿ ತೃತೀಯ, ಶ್ರೇಯಸ್ ಗವಾಳಿ ಕಟಾ ವಿಭಾಗದಲ್ಲಿ ದ್ವಿತೀಯ, ಪ್ರತ್ಯಕ್ಷ ನಾಯ್ಕ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಚಿರಾಗ್ ನಾಯ್ಕ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿತೆಯಲ್ಲಿ ತೃತೀಯ. ಸುಭಾಷ್ ನಾಯ್ಕ ಕುಮಿತೆಯಲ್ಲಿ ತೃತೀಯ. ಸರ್ಪನಕಟ್ಟೆ ಕರಾಟೆ ಕ್ಲಾಸ್‍ನ ಕಲರ್ ಬೆಲ್ಟ್ ಕರಾಟೆ ವಿದ್ಯಾರ್ಥಿಗಳಾದ ವಿನೋದ್ ಗೊಂಡ ಕಟಾ ವಿಭಾಗದಲ್ಲಿ ತೃತೀಯ ಹಾಗೂ ಕುಮಿತೆಯಲ್ಲಿ ಪ್ರಥಮ. ರಕ್ಷಿತಾ ನಾಯ್ಕ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಎಲ್ಲ ಕರಾಟೆ ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರದ ಈಶ್ವರ ನಾಯ್ಕ, ನಾಗರಾಜ ದೇವಾಡಿಗ, ರಾಜಶೇಖರ ಗೌಡ, ನಾಗಶ್ರೀ ನಾಯ್ಕ, ಮಹೇಶ ನಾಯ್ಕ, ಯೋಗೇಶ್ ನಾಯ್ಕ, ವಿನೀತ್ ನಾಯ್ಕ, ಸುರೇಶ್ ಮೊಗೇರ್, ಉಮೇಶ್ ಮೊಗೇರ್ ಮತ್ತು ಶೋಟೊಕಾನ್ ಕರಾಟೆಯ ಸದಸ್ಯರುಗಳು ಕರಾಟೆ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.