• Slide
  Slide
  Slide
  previous arrow
  next arrow
 • ಜನವರಿಯಲ್ಲಿ ಜನತಾ ವಿದ್ಯಾಲಯ ಸುವರ್ಣ ಮಹೋತ್ಸವ ಸಮಾರಂಭ

  300x250 AD

  ಸಿದ್ದಾಪುರ: ತಾಲೂಕಿನ ಬೇಡ್ಕಣಿಯಲ್ಲಿರುವ ಕೆನರಾ ವೆಲ್‍ಫೆರ್ ಟ್ರಸ್ಟ್ ಅಂಕೋಲಾದ ಜನತಾ ವಿದ್ಯಾಲಯದ ಸುವರ್ಣಮಹೋತ್ಸವವನ್ನು ಜನವರಿ-2022ರ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಲಾ ಅಭಿವೃದ್ದಿ ಹಾಗೂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಹೇಳಿದರು.


  ಬೇಡ್ಕಣಿ ಜನತಾ ವಿದ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುಟುಕು ಬ್ರಹ್ಮ ಡಾ.ದಿನಕರ ದೇಸಾಯಿ ಅವರಿಂದ 1965ರಲ್ಲಿ ಬೇಡ್ಕಣಿಯಲ್ಲಿ ಜನತಾ ವಿದ್ಯಾಲಯ ಸ್ಥಾಪಿತಗೊಂಡಿದೆ. ಎರಡು ವರ್ಷದ ಹಿಂದೆಯೇ ಸುವರ್ಣ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕರೊನಾ ಸಾಂಕ್ರಮಿಕ ರೋಗದಿಂದ ಸ್ಥಗಿತಗೊಂಡಿತ್ತು. ಈಗ ಪುನಃ ಚಾಲನೆ ನೀಡಲಾಗಿದೆ. ಕೃಷಿಕರು- ಬಡವರು, ಕೂಲಿಕಾರರು ಇರುವ ಶೈಕ್ಷಣಿಕವಾಗಿ ಹಿಂದುಳಿದ ಬೇಡ್ಕಣಿಯಲ್ಲಿ ಈ ಭಾಗದ ಸುತ್ತಮುತ್ತಲಿನ ಜನತೆಗೆ ಪ್ರೌಢಶಿಕ್ಷಣ ಕಷ್ಟಸಾಧ್ಯವಾಗಿದ್ದ ಸಂದರ್ಭದಲ್ಲಿ ಊರ ಮಹನೀಯರ ಸಹಕಾರದಿಂದ ಕೆನರಾ ವೆಲ್‍ಫೆರ್ ಟ್ರಸ್ಟ್ ಅಂಕೋಲಾದವರು ಸುಸಜ್ಜಿತವಾದ ಕಟ್ಟಡ ಹಾಗೂ ಇತರ ಪರಿಕರಗಳನ್ನು ಒದಗಿಸಿ ಪ್ರೌಢಶಾಲೆ ಸ್ಥಾಪಿಸಿದರು.


  ಪ್ರೌಢಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ತಮ್ಮನ್ನು ಗುರತಿಸಿಕೊಂಡಿದ್ದಾರೆ.

  300x250 AD


  ಸುವರ್ಣಮಹೋತ್ಸವದ ಸವಿ ನೆನಪಿಗಾಗಿ ಅಂದಾಜು 82ಲಕ್ಷರೂಗಳಲ್ಲಿ ಪ್ರೌಢಶಾಲೆಗೆ ಅವಶ್ಯ ಇರುವ ಹಾಗೂ ಶಾಶ್ವತವಾಗಿರುವ ಅಭಿವೃದ್ಧಿ ಕಾರ್ಯನಡೆಸಲು ತೀರ್ಮಾನಿಸಲಾಗಿದೆ. ಶಾಲಾ ಕೊಠಡಿಗೆ ಹಾಗೂ ವರಾಂಡಕ್ಕೆ ಟೈಲ್ಸ್ ಅಳವಡಿಸಿವುದು. ದಿನಕರ ರಂಗಮಂದಿರ ಅಭಿವೃದ್ಧಿ, ಬಡವಿದ್ಯಾರ್ಥಿಗಳಿಗೆ ಫೀ, ಬಸ್ ಪಾಸ್ ಮತ್ತು ತಾತ್ಕಾಲಿಕ ಸಿಬ್ಬಂದಿಗಳ ನಿರ್ವಹಣೆಗೆ ನಿಧಿ ಠೇವಣಿ ಇಡುವುದು, ಕಂಪ್ಯೂಟರ್ ಕಲಿಕಾ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಯೋಜನೆ ಪ್ರಮುಖವಾಗಿದೆ.


  ಈಗಾಗಲೇ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳನ್ನು, ಊರಿನ ಪ್ರಮುಖರನ್ನು ಸಂಪರ್ಕಿಸಿ ಸುವರ್ಣಮಹೋತ್ಸವಕ್ಕೆ ಸಹಕಾರ ನೀಡುವಂತೆ ವಿನಂತಿಸಿಕೊಳ್ಳಲಾಗಿದೆ. ವಿವಿಧ ಉಪಸಮಿತಿಗಳನ್ನು ರಚಿಸಿ ಸಂಚಾಲಕರನ್ನು ನೇಮಕಮಾಡಲಾಗಿದೆ ಎಂದು ಹೇಳಿದರು.


  ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿ.ಎಸ್.ಹೆಗಡೆ ಸಾತನಕೇರಿ,ಉಪಾಧ್ಯಕ್ಷ ರಾದ ಸುರೇಂದ್ರ ಗೌಡ ಮರಲಿಗೆ, ಎ.ಬಿ.ನಾಯ್ಕ ಕಡಕೇರಿ, ಕಾರ್ಯದರ್ಶಿ ನಾಗಪತಿ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಂತ ಹೆಗಡೆ ಕಲ್ಲಾರೆಮನೆ, ಪ್ರಶಾಂತ,ಮುಖ್ಯಾಧ್ಯಾಪಕಿ ಪ್ರತಿಮಾ ಪಾಲೇಕರ, ಶಿಕ್ಷಕ ಜಿ.ಟಿ.ಭಟ್ಟ ಇತರರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top