ಕುಮಟಾ/ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಪರವಾಗಿ ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಭಟ್ಕಳ ಶಾಸಕ ಸುನೀಲ್ ನಾಯ್ಕ ರವಿವಾರ ತಮ್ಮ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಕುಮಟಾ ಬಿಜೆಪಿ ಕಾರ್ಯಾಲಯದಲ್ಲಿ ಮುರೂರು ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮ ಪಂಚಾಯತ ಸದಸ್ಯರ ಸಭೆ ನಡೆಸಿ, ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಾಗಬೇಕಾದರೆ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸುವುದು ಅನಿವಾರ್ಯವಾಗಿದೆ. ಜಿಲ್ಲೆಯ ಎಲ್ಲಗ್ರಾಪಂ ಅಭಿವೃದ್ಧಿಗೆ ಬಿಜೆಪಿ ಎಂಎಲ್‍ಸಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ವಿನಂತಿಸಿದರು.
ಕೇಂದ್ರ, ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರಕಾರವಿದ್ದು, ಹೆಚ್ಚಿನಅನುದಾನತರಲು ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ 5 ಶಾಸಕರು, ಸಚಿವರು, ಸಂಸದರು ಸೇರಿದಂತೆಎಂಎಲ್ಸಿ ಹೊಂದಿದ್ದೇವೆ. ಹೀಗಾಗಿ ಜಿಲ್ಲೆಯಲ್ಲಿಎಲ್ಲಾಗ್ರಾ.ಪಂ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ ಸದಸ್ಯರು ಬಿಜೆಪಿ ಅಭ್ಯರ್ಥಿಗೆ ಮತ ನೀಡಲಿದ್ದಾರೆಎಂದುಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾವಂಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಪ್ರಭಾರಿ ಶಿವಾನಿ ಶಾಂತಾರಾಮ್, ಜಿಲ್ಲಾ ವಿಶೇಷ ಆಹ್ವಾನಿತ ಎಂ.ಜಿ.ಭಟ್, ನಾಗರಾಜ ನಾಯಕತೊರ್ಕೆ, ಪ್ರಧಾನ ಕಾರ್ಯದರ್ಶಿ ಜಿ.ಐ.ಹೆಗಡೆ, ವಿನಾಯಕ ನಾಯ್ಕ, ಮಾಜಿಜಿ.ಪಂ ಸದಸ್ಯಗಜಾನನ ಪೈ, ಮಹಾಶಕ್ತಿ ಕೇಂದ್ರದಅಧ್ಯಕ್ಷ ಮಧುಸೂದನ ಹೆಗಡೆ ಹಾಗೂ ಮತ್ತಿತರರ ಪ್ರಮುಖರು ಇದ್ದರು.
ಬಳಿಕ ಹೊನ್ನಾವರತಾಲೂಕಿನಕಾಸರಗೋಡ ಹಾಗೂ ವಿವಿಧ ಪಂಚಾಯತಗಳಲ್ಲಿ ಶಾಸಕ ಸುನೀಲ್ ನಾಯ್ಕಅವರು ಬಿಜೆಪಿ ಎಂ.ಎಲ್.ಸಿ. ಅಭ್ಯರ್ಥಿಗಣಪತಿ ಉಳ್ವೇಕರ್ ಪರ ಮತಯಾಚನೆ ಮಾಡಿದರು.
ವಿಧಾನ ಪರಿಷತ್‍ಚುನಾವಣೆಯಲ್ಲಿಗಣಪತಿ ಉಳ್ವೇಕರ್ ಅವರೇ ಗೆಲುವು ಸಾಧಿಸಲಿದ್ದಾರೆ. ಇದರಿಂದ ಮುಂದಿನ ದಿನದಲ್ಲಿಗ್ರಾಮೀಣ ಭಾಗದಅಭಿವೃದ್ಧಿಗೆ ಸಹಕಾರಿಯಾಗಲಿದೆ. ಗಣಪತಿ ಉಳ್ವೇಕರ್ ಉತ್ತಮ ಹಾಗೂ ಸಜ್ಜನ ವ್ಯಕ್ತಿ. ಎಲ್ಲಜನಪ್ರತಿನಿಧಿಗಳು ಮೊದಲ ಪ್ರಾಶಸ್ತ್ಯದ ಮತ ನೀಡಿಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿಜಿಲ್ಲಾಅಧ್ಯಕ್ಷ ವೆಂಕಟೇಶನಾಯಕ, ಮಂಡಲ ಅಧ್ಯಕ್ಷರಾಜು ಭಂಡಾರಿ, ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯಕ, ಗುರುಪ್ರಸಾದ ಹೆಗಡೆಇದ್ದರು
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆಉಪಯೋಗವಾಗುವಂಥ ಸಡಕ್ ಯೋಜನೆಗಳು, ಸ್ವಚ್ಛ ಜಲ ಯೋಜನೆ, ಸ್ವಚ್ಛಗ್ರಾಮಯೋಜನೆ ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿ, ಕಾರ್ಯರೂಪಕ್ಕೆತಂದಿದೆ. ಪ್ರತಿ ಮನೆಗೊಂದು ಶೌಚಾಲಯವನ್ನುಗ್ರಾಪಂಮೂಲಕ ಕಟ್ಟಿಸಲಾಗುತ್ತಿದೆ. ನಾನು ಆಯ್ಕೆಯಾದರೆ ಪ್ರತಿಗ್ರಾಮ ಪಂಚಾಯಿತಿಗೆ ಸ್ಥಳೀಯ ಬಿಜೆಪಿ ಶಾಸಕರ ಸಹಾಯದಿಂದ ಹೆಚ್ಚಿನಅನುದಾನವನ್ನುತರಲು ಪ್ರಯತ್ನಿಸುತ್ತೇನೆ. – ಗಣಪತಿ ಉಳ್ವೇಕರ್ (ಬಿಜೆಪಿ ಎಂಎಲ್‍ಸಿ ಅಭ್ಯರ್ಥಿ)