ಹೊನ್ನಾವರ: ಸರಕಾರದ ಮಾರ್ಗದರ್ಶನದಂತೆ ತಾಲೂಕಿನ ಹಡಿನಬಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ 25 ನೆಯ ವರ್ಷದ ವಾರ್ಷಿಕ ಮಹಾಸಭೆ ಶನಿವಾರ ನಡೆಯಿತು.
ಸಂಘದ ಅಧ್ಯಕ್ಷ ಹರಿಯಪ್ಪ ನಾಯ್ಕ ಸಭೆಯ ಅಧ್ಯಕ್ಷತೆವಹಿಸಿ, ಮಾತನಾಡಿ, ಬ್ಯಾಕಿಂಗ್ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ವಿ.ಎಸ್.ಎಸ್. ಹಡಿನಬಾಳ 2020-21 ನೇ ಸಾಲಿನಲ್ಲಿ ರೂ.25,27,365.56-00 ಲಾಭಗಳಿಸಿದ್ದು, ಇದರಲ್ಲಿ ನಿರ್ದೇಶಕ ಮಂಡಳಿಯ ಸಹಯೋಗ, ಸಿಬ್ಬಂದಿಗಳ ಪರಿಶ್ರಮ ಹಾಗೂ ಶೇರುದಾರರ ಸಹಕಾರ ಕಾರಣವೆಂದು ಸಭೆಯಲ್ಲಿ ಅಧ್ಯಕ್ಷರು ತಿಳಿಸಿದರು.
ಪ್ರತಿ ವರ್ಷದಂತೆ ಈ ಬಾರಿಯು 14 ಹಿರಿಯ ರೈತರಿಗೆ ಸನ್ಮಾನ ಕಾರ್ಯಕ್ರಮದ ಮುಖೇನ ಸಭೆಯು ಮುಕ್ತಾಯಗೊಂಡಿತು. ಸಹಕರಿಸಿದ ಎಲ್ಲ ರೈತ ಬಾಂಧವರಿಗೆ, ಆಡಳಿತ ಮಂಡಳಿಗೆ ಹಾಗೂ ಸಂಸ್ಥೆಯ ಎಲ್ಲ ನೌಕರ ವರ್ಗದವರಿಗೆ ವಿಎಸ್‍ಎಸ್ ಧನ್ಯವಾದ ತಿಳಿಸಿದೆ.