ಕಾರವಾರ: ಎನ್‍ಸಿಸಿ ದೇಶದ ಎರಡನೇ ಸಾಲಿನ ರಕ್ಷಣಾ ಪಡೆಗಳಲ್ಲೊಂದು. ದೇಶದ ಕಷ್ಟದ ಸಮಯದಲ್ಲಿ ಯುವಕರನ್ನು ಅಣಿಗೊಳಿಸುತ್ತದೆ ಎಂದು ಕ್ಯಾಪ್ಟನ್ ಅರುಣ್ ಗಾಂವಕರ್ ಅಭಿಪ್ರಾಯಪಟ್ಟರು.
ಸರಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಏರ್ಪಟ್ಟ ಎನ್‍ಸಿಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಎನ್‍ಸಿಸಿ ದೇಶದ ಎರಡನೇ ಸಾಲಿನ ರಕ್ಷಣಾ ಪಡೆಯಾಗಿದೆ. ರಾಷ್ಟ್ರೀಯ ವಿಪತ್ತುಗಳ ಸಂದರ್ಭದಲ್ಲಿ ಎನ್‍ಸಿಸಿ ಪಾತ್ರ ದೊಡ್ಡದು. ದೇಶದ ಮೊದಲ ಪ್ರಧಾನಿ ಜವಹಾರಲಾಲ್ ನೆಹರು ಶಿಸ್ತು ಬದ್ಧಯುವಕರ ಒಂದು ಪಡೆ ನಿರ್ಮಿಸಲು ಎನ್‍ಸಿಸಿ ಪ್ರಾರಂಭಿಸಿದರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ವಿಜಯಾನಾಯ್ಕ, ಎನ್.ಸಿ.ಸಿ. ಸೇರುವಯುವಕರು ಸಮಯ ಪ್ರಜ್ಞೆ, ವಿದೇಯತೆ, ಕರ್ತವ್ಯ ನಿರ್ವಹಣೆ, ಸತ್ಯ ಹೇಳುವುದನ್ನು ಕಲಿಯಬೇಕು. ಇದೇ ಎನ್‍ಸಿಸಿ ಮೂಲ ಮಂತ್ರ ಎಂದರು.
ಕಮಾಂಡರ್ ಸತ್ಯನಾಥ ಬೋಸ್ಲೆ ಮಾತನಾಡಿದರು. ವಿದ್ಯಾರ್ಥಿಗಳು ಹಮ್ ಸಬ್ ಭಾರತೀಯ ಹೈ ಎಂಬ ಗೀತೆ ಹಾಗೂ ದೇಶಭಕ್ತಿಗೀತೆ ಹಾಡಿದರು. ಪ್ರತಿಜ್ಞಾವಿಧಿ ಸ್ವೀಕರಿಸಿದರು.ಎನ್‍ಸಿಸಿ ದಿನದ ನಿಮಿತ್ತ ಮೆಡಿಕಲ್‍ಕಾಲೇಜುಆಸ್ಪತ್ರೆಯಲ್ಲಿರಕ್ತದಾನ ಮಾಡಲಾಯಿತು. ಬೀಚ್‍ಕ್ಲಿನಿಂಗ್ ಮಾಡಿ, ವೃದ್ಧಾಶ್ರಮಕ್ಕೆಆಹಾರಕಿಟ್ ನೀಡಿದರು. ವೇದಿಕೆಯಲ್ಲಿ ಸರ್ಕಾರಿ ಪದವಿ ಕಾಲೇಜಿನಎನ್‍ಸಿಸಿ ಯುನಿಟ್ ಸಬ್ ಲೆಫ್ಟಿನೆಂಟ್‍ಡಾ.ಗೀತಾ ತಳವಾರ ಇದ್ದರು. ಎನ್‍ಸಿಸಿ ಕೆಡೆಟ್‍ಗಳು ಭಾಗವಹಿಸಿದ್ದರು.