ಅಂಕೋಲಾ: ಭಾರತದ ಸಂವಿಧಾನ ದಿನವನ್ನು ತಾಲೂಕಿನ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ
ಆಚರಿಸಲಾಯಿತು.
ವೇದಿಕೆಯಲ್ಲಿದ್ದ ಗಣ್ಯರು ಡಾ. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಗಂಧದ ಕಡ್ಡಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಸಂಸತ್ ಭವನದ ಸೆಂಟ್ರಲ್ ಹಾಲ್‍ನಲ್ಲಿ ನರೇಂದ್ರ ಮೋದಿಜಿಯವರು ಸಂವಿಧಾನ ದಿನದ ಕುರಿತು ಮಾತನಾಡಿದ ಬಗ್ಗೆ ಹೇಳುತ್ತ ಅಂಬೇಡ್ಕರ್ ಮತ್ತು ಸಂವಿಧಾನ ದಿನದ ಕುರಿತು ಮಾತನಾಡಿದರು.
ನಂತರ ಹಲವು ವರ್ಷಗಳಿಂದ ಆರ್‍ಎಸ್‍ಎಸ್‍ನಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಸಾಮಾಜಿಕ ಕಾರ್ಯ ಮಾಡುತ್ತ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಬಂಗಾರಿ ಬಿ ಆಗೇರ್ ಹನುಮಟ್ಟಾ ಅವರಿಗೆ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ತಾರಾ ಗಾಂವಕರ, ತಾಲೂಕ ಮಹಿಳಾ ಮೋರ್ಚಾ ಪ್ರ ಕಾರ್ಯದರ್ಶಿ ಪ್ರಜ್ಞಾ ಕೇಣಿಕರ್, ಎಸ್‍ಸಿ ಮೋರ್ಚಾ ಜಿಲ್ಲಾ ಸದಸ್ಯ ಮಂಜುನಾಥ ಆಗೇರ್, ಜಿಲ್ಲಾ ಸಂಚಾಲಕ ಮತ್ತು ಮಾಧ್ಯಮ ಪ್ರಮುಖ ನಿತೇಶ ಕೇಣಿ, ಉಪಾಧ್ಯಕ್ಷ ಪ್ರಕಾಶ ಅಂಕೋಲೆಕರ್, ಮಂಜುನಾಥ್ ಶೇಡಗೇರಿ, ಕಾರ್ಯದರ್ಶಿ ವಿಷ್ಣು ಬಂಟ, ಖಜಾಂಚಿ ಸಂದೇಶ ಶ್ರೀಪಾದ್ ಬಂಟ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾ ಪ್ರ ಕಾರ್ಯದರ್ಶಿ ಗುರು ಶೇಡಗೇರಿ ಸ್ವಾಗತಿಸಿದರು ಹಾಗೂ ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಮುರಳಿಧರ ಬಂಟ ಪ್ರಾಸ್ತವಿಕವಾಗಿ ಮಾತನಾಡಿ, ವಂದಿಸಿದರು.