ಯಲ್ಲಾಪುರ: ಪಟ್ಟಣದ ಖಾಸಗಿ ಹೊಟೇಲ್ ನ ಸಭಾ ಭವನದಲ್ಲಿ ಕಾರ್ಯಕರ್ತರ ಸಭೆ ಮತ್ತು ವಿಧಾನ ಪರಿಷತ್ ಅಭ್ಯರ್ಥಿ ಭೀಮಣ್ಣ ಪರ ಮತಯಾಚಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಮೊದಲು ನಮ್ಮ ಪಕ್ಷದ ಸೈನ್ಯ ಗಟ್ಟಿಯಾಗಿರಬೇಕು. ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಶಿಸ್ತಿನ ಪಾಠ ಹೇಳಿದರು
ನಡೆಯುವ ಪ್ರತಿಯೊಂದು ಚುನಾವಣೆಯಲ್ಲಿ ಹಣ ಹಾಗೂ ಗುಣದ ಮೇಲೆ ಚುನಾವಣೆ ನಡೆಯಲಿದ್ದು ಕೊನೆಗೆ ಮತದಾರರು ಹಣವನ್ನು ತಿರಸ್ಕರಿಸಿ ಗುಣ ಇರುವ ಅಭ್ಯರ್ಥಿಯನ್ನು
ಗೆಲ್ಲಿಸಲಿದ್ದಾರೆ. ಮೂಲಸೌಕರ್ಯಕ್ಕೆ ಕೋಡಬೇಕಾದ ಹಣ ರಾಜಕಾರಣಿಗಳ ಜೇಬಿನಲ್ಲಿ ಸೇರುತ್ತಿದೆ, ತಾಲೂಕಿನ ಗಟಾರ, ಸಿಮೆಂಟ್ ತೀರಾ ಕಳಪೆ ಮಟ್ಟದಲ್ಲಿ ಕೂಡಿದೆ 20-20 ಯೋಜನೆಯಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅದು ಯಾವ ಯೋಜನೆ ಎಂದರೆ ಕಾಮಗಾರಿ ಮಾಡುವಾಗ 20% ಕಮಿಷನ್ ಕೊಡುವ ಯೋಜನೆಯಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು ಈ ಬಗ್ಗೆ ನಮ್ಮ ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ ಎಂದರು.