ಯಲ್ಲಾಪುರ: ಕಲೆ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇದೆ. ಕಲೆಯನ್ನು ಗುರುತಿಸಿ ಬೆಳೆಸಿ ಪ್ರೋತ್ಸಾಹಿಸುವವರು ಬೇಕು. ಇಂತಹ ಸಂಗೀತ ಶಾಲೆಯ ಮೂಲಕ ಈ ಹಳ್ಳಿಯಲ್ಲಿ ಸಂಗೀತಾರಾಧನೆಯ ಸೇವೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಬಳಗಾರಿನ ಕೋರೆಮಠ ಮಹಾಗಣಪತಿ ದೇವಸ್ಥಾನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹಾಗಣಪತಿ ಸಂಗೀತ ವಿದ್ಯಾಲಯ ಬಳಗಾರ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡ ಸಂಗೀತ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ಊರಿಗೆ ಕಲೆಯೂ ಜೀವಂತಿಕೆಯನ್ನು ತುಂಬುತ್ತದೆ. ಎಷ್ಟೋ ಪ್ರತಿಭೆಗಳನ್ನು ಇಲ್ಲಿ ಈ ಸಂಗೀತ ವಿದ್ಯಾಲಯ ಮತ್ತು ಶಿಕ್ಷಕರು ತಯಾರು ಮಾಡುವ ಮೂಲಕ ಕಲೆಗೆ ನೆಲೆ ನೀಡುತ್ತಿದ್ದಾರೆ ಎಂದು ಹೇಳಿದರು.ಗಣ್ಯ ವರ್ತಕ ಡಿ.ಶಂಕರ ಭಟ್ಟ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು.
ವಿ.ಹಿಂ.ಪ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ್, ನ್ಯಾಯವಾದಿ ಜಿ.ಆರ್.ಹೆಗಡೆ,ಪ್ರಮುಖರಾದ ಕೃಷ್ಣ ಭಾಗ್ವತ್,ಗಣಪತಿ ವಡಮಾಂವ್, ರಾಮಚಂದ್ರ ವಡಮಾಂವ್,ಸಂಗೀತ ಶಿಕ್ಷಕ ಗಣೇಶ ನೆರ್ಲೆಮನೆ, ಸಂಗೀತ ವಿದೂಷಿ ವಾಣಿ ರಮೇಶ ಹೆಗಡೆ ಉಪಸ್ಥಿತರಿದ್ದರು. ಶ್ರೀಪತಿ ಮುದ್ದೆಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಪ್ರಮೋದ ಹೆಗಡೆ ಹಾಗೂ ಜಿ.ಆರ್.ಹೆಗಡೆ ಇವರುಗಳನ್ನು ವಿದ್ಯಾಲಯದ ವತಿಯಿಂದ ಗೌರವಿಸಲಾಯಿತು.
ವಿಶ್ವನಾಥ ಹಳೆಮನೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ. ಸಂಗೀತ ವಿದ್ಯಾಲಯದ ಅಧ್ಯಕ್ಷೆ ಮಹಾದೇವಿ ಶ್ರೀನಾಥ್ ಅಡ್ಕೆಪಾಲ್ ಪ್ರಾಸ್ತಾವಿಕಗೈದು ಕೊನೆಯಲ್ಲಿ ವಂದಿಸಿದರು.
ಗಾಯನ: ನಂತರ ವಿದೂಷಿ ವಾಣಿ ರಮೇಶ ಹೆಗಡೆ, ಗಣೇಶ ಹೆಗಡೆ ನೆರ್ಲೆಮನೆ ಗಾಯನ ಕಾರ್ಯಕ್ರಮ ನಡೆಯಿತು. ಮಹಾಗಣಪತಿ ಸಂಗೀತ ವಿದ್ಯಾಲಯದ ಗೀತಾ ಹಳೆಮನೆ, ಗೌರಿ ವಡಮಾಂವ್, ಜಯಲಕ್ಷ್ಮಿ, ಮಹಾದೇವಿ ಅಡ್ಕೆಪಾಲ್,ಅಶ್ವಿನಿ ಸೇರಿದಂತೆ 15 ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು.
ಗಣಪತಿ ಹೆಗಡೆ ಯಲ್ಲಾಪುರ,ಗಣೇಶ ಹೆಗಡೆ ಹಾರ್ಮೋನಿಯಂ,ಹಾಗೂ ಗಣಪತಿ ದುರ್ಗದ,ಗಣೇಶ ಗುಂಡ್ಕಲ್ ತಬಲಾ ಸಾಥ್ ನೀಡಿದರು.