ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ ಗಟಾರಕ್ಕಿಳಿದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಆರತಿಬೈಲ್ ತಿರುವಿನಲ್ಲಿ ಸೋಮವಾರ ನಡೆದಿದೆ.
ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟ್ಟಿದ್ದ ಟ್ಯಾಂಕರ ಲಾರಿ ಆರತಿಬೈಲ್ ಘಟ್ಟದ ಇಳಿಜಾರಿನ ಅಪಾಯಕಾರಿ ತಿರುವಿನಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಟ್ಯಾಂಕರ್ ನ ಮುಂಭಾಗ ಸುರಕ್ಷತಾ ತಡೆಬೇಲಿ ದಾಟಿ ಗಟಾರಕ್ಕಿಳಿದಿದೆ. ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಈ ಪ್ರದೇಶದಲ್ಲಿ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು.ನಿರ್ವಹಣೆಯ ಬಗ್ಗೆ ನಿರ್ಲಕ್ಷ್ಯ ತಾಳಿರುವುದರಿಂದ ಇಂತಹ ಅವಘಡಗಳು ಪದೇ ಪದೇ ಸಂಭವಿಸುತ್ತಿದ್ದು. ಹೆದ್ದಾರಿಯ ದುರವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.