ಶಿರಸಿ: ತಾಲೂಕಿನ ಶ್ರೀ ಕ್ಷೇತ್ರ ಮಂಜಗುಣಿಯ ವೆಂಕಟ್ರಮಣದೇವಸ್ಥಾನದ ಸಭಾ ಮಂಟಪದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ಗಾನ ಸೇವಾ ಕಾರ್ಯಕ್ರಮ ನಡೆಯಿತು.
ಅಂತರಾಷ್ಟ್ರೀಯ ಗಾಯನ ಖ್ಯಾತಿಯ ಪಂ.ಜಯತೀರ್ಥ ಮೇವುಂಡಿಯವರು ಕಳೆದ ಅನೇಕ ವರ್ಷಗಳಿಂದ ಗಾಯನ ಸೇವಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದು ಇದೇ ಸಂದರ್ಭದಲ್ಲಿ ಅನೇಕ ಗಾಯಕರು ಮೇವುಂಡಿಯವರ ಶಿಷ್ಯ ಬಳಗವು ಪಾಲೊಳ್ಳುವುದು ವಿಶೇಷತೆ. ಬಾಲ ಪ್ರತಿಭೆ ಹುಬ್ಬಳ್ಳಿಯ ಕು. ರೇವತಿ ಹಾಗೂ ಪ್ರಗತಿ ಇವರ ಗಾಯನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಭಕ್ತಿಗಾನ ಕಾರ್ಯಕ್ರಮ ಮುಂಜಾನೆ ಆರು ಘಂಟೆಯಿಂದ ಆರಂಭಗೊಂಡು ಇಳಿಹೊತ್ತು ಆರುಘಂಟೆಯವರೆಗೆ ನಡೆಯಿತು.
ಸೇವೆಯಲ್ಲಿ ಶ್ರೀಮತಿ ವಾಣಿರಮೇಶ ಯಲ್ಲಾಪುರ, ವಿಭಾ ಹೆಗಡೆ, ಚೈತನ್ಯ ಪರಬ್,ಐರಾಆಚಾರ್ಯ ಉಡುಪಿ, ಲಲಿತ್ ಮೇವುಂಡಿ ಇನ್ನಿತರರು ನಡೆಸಿದ ಗಾಯನ ಸೇವೆ ದೇವಸ್ಥಾನದಕಲ್ಲಿನ ಸಭಾ ಮಂಟಪದಲ್ಲಿ ಹೊಸದೊಂದು ವಾತಾವರಣ ಸೃಷ್ಠಿಸಿತು.
ಹಾರ್ಮೋನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಯಡಳ್ಳಿ., ಭರತ ಹೆಗಡೆ ಹೆಬ್ಬಲಸು ಸಹಕರಿಸಿದರೆ ತಬಲಾ ವಾದನದಲ್ಲಿ ಗುರುರಾಜ ಹಗಡೆ ಆಡುಕಳ, ಯೋಗೀಶ ಭಟ್ಟ ಬೆಂಗಳೂರು ಮತ್ತು ಸಂಜೀವ ಜೋಶಿ ಹಾಗೂ ತಬಲಾ ಪಕ್ವಾಜ್ ನಲ್ಲಿ ಗಣೇಶ ಗುಂಟ್ಕಲ್ ಸಾಥ್ ನೀಡಿದರು.
ಸೇವೆಯ ಕೊನೆಯ ಹಂತವಾಗಿ ಪಂ.ಜಯತೀರ್ಥರ ಗಾನ ಸೇವೆಗೆ ಪ್ರಕಾಶ ಹೆಗಡೆಕಲ್ಲಾರೆಮನೆ ಮುರಳಿಯ ನಾದದ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.
ಗಾನ ಸೇವೆಗೆ ಪಾಲ್ಗೊಂಡ ಎಲ್ಲಾ ಕಲಾವಿದರಿಗೆ ಶ್ರೀ ದೇವಾಲಯದ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ಭಟ್ಟ ಪ್ರಸಾದ ನೀಡಿ ಆಶೀರ್ವದಿಸಿದರು