ಯಲ್ಲಾಪುರ: ತಾಲೂಕಿನ ಕಂಚನಹಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ದೀಪೋತ್ಸವ ನಡೆಯಿತು.
ದೇವಸ್ಥಾನದ ಆವಾರದಲ್ಲಿ ನೂರಾರು ದೀಪಗಳನ್ನು ಬೆಳಗುವ ಮೂಲಕ ದೀಪೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ದೀಪದ ಬೆಳಕಿನಲ್ಲಿ ಗ್ರಾಮಸ್ಥರು ರಾಮಲಿಂಗೇಶ್ವರನ ಭಜನೆಗಳನ್ನು ಹಾಡಿದ್ದು ವಿಶೇಷವಾಗಿತ್ತು. ಕಂಚನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ದೀಪೋತ್ಸವದಲ್ಲಿ ಭಾಗವಹಿಸಿ, ರಾಮಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.