ಶಿರಸಿ: ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ರಾಷ್ಟ್ರಮಟ್ಟದ ತರಬೇತಿದಾರ ಸೈನಿಕ ಕಾಶಿನಾಥ ನಾಯ್ಕ ಅವರಿಗೆ ಜಿಲ್ಲಾ ಯೋಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಮತ್ತು ಶಿರಸಿ ಶೈಕ್ಷಣಿಕ ಶಿಕ್ಷಣ ಇಲಾಖೆ ಗಂಭೀರ ಸ್ವರೂಪದ ಅಪಮಾನ ಮಾಡಿರುವ ವರದಿ ತಡವಾಗಿ ಬೆಳಕಿಗೆ ಬಂದಿದ್ದು, ಇದಕ್ಕೆ ಕ್ರೀಡಾಭಿಮಾನಿಗಳ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕಾಶಿನಾಥ ನಾಯ್ಕ ಅವರ ವಿಶೇಷ ಆಸಕ್ತಿಯಿಂದ ಶಿರಸಿಯ ಶ್ರೀ ಮಾರಿಕಾಂಬ ಜಿಲ್ಲಾ ಕ್ರೀಡಾಂಗಣದಲ್ಲಿ ನ.25 ರಂದು ಒಂದು ದಿನದ ದೈಹಿಕ ಶಿಕ್ಷಕರಿಗೆ ಕ್ರೀಡಾ ತರಬೇತಿ ಆಯೋಜಿಸಲಾಗಿತ್ತು. ಕ್ರೀಡಾ ತರಭೇತಿಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಿಂದ ಜರುಗಿಸಲಾಗಿತ್ತು.
ಜಿಲ್ಲೆಯಲ್ಲಿ ಪ್ರತಿಭಾವಂತ ಯುವ ಕ್ರೀಡಾ ಪಟುವಿಗೆ ಉತ್ತೇಜಿಸುವ ಹಾಗೂ ಹೊಸ ಕ್ರೀಡಾ ತಂತ್ರಜ್ಞಾನ ದೈಹಿಕ ಶಿಕ್ಷಕರಿಗೆ ನೀಡುವ ಉದ್ದೇಶದಿಂದ ಪ್ರಾಯೋಗಿಕ ಹಾಗೂ ಸಿದ್ದಾಂತ ಪದ್ದತಿಯಲ್ಲಿ ಪ್ರಥಮ ಹಂತವಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ದೈಹಿಕ ಶಿಕ್ಷಕರಿಗೆ ಕ್ರೀಡಾ ತರಬೇತಿಯನ್ನು ಸ್ವ ಇಚ್ಛಾಶಕ್ತಿಯಿಂದ, ಉಚಿತವಾಗಿ ಇತ್ತೀಚಿನ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರ ಪ್ರಾಥಮಿಕ ಹಂತದ ತರಭೇತಿದಾರ, ಕಾಮನ್ ವೆಲ್ತ ಕಂಚಿನ ಪದಕ ವಿಜೇತ ಹಾಗೂ ಪ್ರಸಕ್ತ ಸೈನಿಕ ಕ್ರೀಡಾ ತರಬೇತಿದಾರರಾದ ಕಾಶಿನಾಥ ಅವರ ಮುತುವರ್ಜಿಯಲ್ಲಿ ತರಬೇತಿ ಶಿಬಿರ ಸಂಘಟಿಸಲ್ಪಟ್ಟಿತ್ತು.
ಆದರೆ, ಯುವಜನ ಸೇವಾ ಇಲಾಖೆ ಹಾಗೂ ಶೈಕ್ಷಣಿಕ ಇಲಾಖೆಯು ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾ ತರಭೇತಿ ಹಾಜರಾದ ದೈಹಿಕ ಶಿಕ್ಷಕರಿಗೆ ನೀಡಿದ ಪ್ರಮಾಣ ಪತ್ರದಲ್ಲಿ ಔಚಿತ್ಯಕ್ಕೂ ತರಭೇತಿ ನೀಡಿದ ಕಾಶಿನಾಥ ನಾಯ್ಕ ಅವರ ಹೆಸರನ್ನು ಪ್ರಸ್ತಾಪಿಸದೇ, ಉಲ್ಲೇಖಿಸಿದೇ ಹಾಗೂ ಪ್ರಮಾಣ ಪತ್ರದಲ್ಲಿ ಸಹಿಯನ್ನು ದಾಖಲಿಸದೇ ಪ್ರಮಾಣ ಪತ್ರ ನೀಡಿರುವುದು ಪ್ರಮಾದಕ್ಕೆ ಕಾರಣವಾಗಿದೆ.
ಕ್ರೀಡಾಸಕ್ತರ ಆಕ್ರೋಶ: ಅಧಿಕಾರಿಯುಕ್ತ ಅಧಿಕಾರಿಗಳಿಂದ ಕಾಶಿನಾಥ ನಾಯ್ಕ ಅವರಿಗೆ ಉಂಟಾಗಿರುವ ಅವಮಾನ ಸಾರ್ವಜನಿಕವಾಗಿ ಕ್ರೀಡಾಸಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ಸ್ಪಂದನಾ ಸ್ಪೋಟ್ರ್ಸ ಅಕಾಡೆಮಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಏ ರವೀಂದ್ರ ನಾಯ್ಕ ಇಲಾಖೆಯ ನಿರ್ಲಕ್ಷಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.