ದಾಂಡೇಲಿ: ಬಿಡಾಡಿ ಹಸುವೊಂದು ಪ್ಲಾಸ್ಟಿಕ್ ತಿಂದು ಅಸ್ವಸ್ಥವಾಗಿ ಸಾವನ್ನಪ್ಪಿದ್ದು, ಹಸುವನ್ನು ಪೂಜಿಸಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ನಗರದಲ್ಲಿ ಬೀದಿಯಲ್ಲಿ ಮೇಯುವ ಹಸುವೊಂದು ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತಿಂದಿದ್ದರ ಪರಿಣಾಮ ಅಸ್ವಸ್ಥವಾಗಿ ಅಲ್ಲಿಯೇ ಕುಸಿದು ಬಿದ್ದಿದೆ.
ಇದನ್ನು ಗಮನಿಸಿದ ಪ್ರವೀಣ್ ಕೊಠಾರಿ ಎಂಬುವವರು ಹಾಗೂ ಆತನ ಸ್ನೇಹಿತರು ಸ್ಥಳಕ್ಕೆ ವೈದ್ಯರನ್ನು ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹಸುವು ಸಾವು ಕಂಡಿದ್ದು , ನಂತರ ಪ್ರವೀಣ್ ಹಾಗೂ ಸ್ಥಳೀಯ ಯುವಕರು ಸೇರಿ ಹಸುವಿನ ಅಂತ್ಯಸoಸ್ಕಾರವನ್ನು ಮಾಡಿದ್ದಾರೆ. ಸಾವು ಕಂಡ ಜಾಗದಲ್ಲಿ ಹಸುವಿಗೆ ಪೂಜೆ ಸಲ್ಲಿಸಿ ಅದನ್ನು ನಗರದ ಬೇರೆಡೆ ಕೊಂಡೊಯ್ದು ವಿಧಿ ವಿಧಾನದ ಮೂಲಕ ಸಂಸ್ಕಾರ ಮಾಡಿ ಮಾನವೀಯತೆ ತೋರಿದ್ದಾರೆ.