ಮುಂಡಗೋಡ: ಸಂವಿಧಾನವು ನಮ್ಮ ಮೂಲಭೂತ ಹಕ್ಕು ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರು ತಿಳಿಯಬೇಕು ನಾವೆಲ್ಲರೂ ನಮ್ಮ ಕರ್ತವ್ಯ ಅರಿತು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಸಂವಿಧಾನದ ಆಶಯ ಈಡೇರಲು ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶ ಕೇಶವ.ಕೆ ಹೇಳಿದರು.
ನಾರ್ಥ್ ಕರ್ನಾಟಕ ಜೆಜ್ವಿತ ಎಜುಕೇಶನ್, ಚಾರಿಟೇಬಲ್ ಸೊಸೈಟಿ ಮತ್ತು ಲೊಯೋಲ ವಿಕಾಸ ಕೆಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು. ಡಾ.ಬಾಬಾ ಸಾಹೇಬ ಅಂಬೇಡ್ಕರವರು ಸಾಕಷ್ಟು ಶ್ರಮವಹಿಸಿ ಸಂವಿಧಾನವೆಂಬ ಗ್ರಂಥ ದೇಶಕ್ಕೆ ನೀಡಿದ್ದಾರೆ. ಸಮಾನತೆಗಾಗಿ ಸಂವಿಧಾನವಿದೆ ಆದರೆ ಸಮಾನತೆ ಇನ್ನೂ ಸಮರ್ಪಕವಾಗಿ ಕಾಣುತ್ತಿಲ್ಲ ನ್ಯಾಯಾಲಯಗಳಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುತ್ತಿಲ್ಲ. ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವ ಕೆಲಸವನ್ನು ಮಾಡಬೇಕು. ಭಾರತಿಯರಾದ ನಾವು ಕಾನೂನನ್ನು ಯಾವಾಗ ಗೌರವಿಸುತ್ತೇವೆ ನಮ್ಮ ಜೀವನ ಸುಖಕರವಾಗಿರುತ್ತದೆ. ಇಲ್ಲದಿದ್ದರೆ ಕಷ್ಟದ ದಿನಗಳನ್ನು ಅನುಭವಿಸಬೇಕಾಗುತ್ತದೆ. ಕಾನೂನಿನ ಬಗ್ಗೆಯ ಹೆಚ್ಚು ತಿಳುವಳಿಕೆಯನ್ನು ಹೊಂದಬೇಕು ಹಾಗೂ ಈ ಸಮಾಜಕ್ಕೆ ನಮ್ಮಿಂದಾದ ಕೊಡುಗೆಯನ್ನು ನೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.
ತಹಸೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿ, ನಮ್ಮ ದೇಶವನ್ನು ಮುನ್ನಡೆಸಲು ಸಂವಿಧಾನ ಅತಿ ಮುಖ್ಯವಾಗಿದೆ. ಸಂವಿಧಾನ ಎಂಬುದು ನಮ್ಮೆಲ್ಲರಿಗೂ ಗ್ರಂಥವಾಗಿದೆ. ನಮ್ಮ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ತಿಳಿಯಲು ಎಲ್ಲರು ಸಂವಿಧಾನವನ್ನು ಓದಬೇಕು. ವಿದ್ಯಾರ್ಥಿಗಳು ಈಗನಿಂದಲೇ ಸಂವಿಧಾನದ ಬಗ್ಗೆ ತಿಳಿದುಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮವಾದ ಜೀವನ ಸಾಗಿಸಲು ಹೆಚ್ಚು ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ ಅವರ ಭಾವತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂವಿಧಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಇದ್ದಕ್ಕೂ ಮುನ್ನ ಪಟ್ಟಣದ ಪ್ರವಾಸ ಮಂದಿರದಿಂದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರ ಕೋಲಾಟ, ಪುರಷರ ಡೊಳ್ಳು ಕುಳಿತ ನೆರೆದಿದ್ದ ಜನರ ಗಮನ ಸೆಳೆಯಿತು.
ಲೊಯೋಲ ಸಂಸ್ಥೆಯ ಮುಖ್ಯಸ್ಥ ಪ್ರಾನ್ಸಿಸ್ ಮಿನೇಜಸ್, ಹ್ಯಾರಿಟೇರಿ, ಶಿಕ್ಷಣಾಧಿಕಾರಿ ವಿ.ವಿ.ನಡವಿನಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ ಡಿ, ಪಿಎಸ್‍ಐ ಬಸವರಾಜ ಮಬನೂರ, ಸರಕಾರಿ ಪ್ರಥಮ ದರ್ಜೆ ಕಾಲೇಜನ ಪ್ರಾಧ್ಯಾಪಕಿ ಮಂಜುಳಾ ಪೂಜಾರ, ಮಲ್ಲಮ್ಮ ಸೇರಿದಂತೆ ಮುಂತಾದವರಿದ್ದರು. ನಾಗರಾಜ ಕಟ್ಟಿಮನಿಸಂವಿಧಾನದ ಪೀಠಿಕೆ ಭೋಧಿಸಿದರು.ನಾಗರಾಜ ಬಾರ್ಕಿ ಸ್ವಾಗತಿಸಿದರು, ಲಕ್ಷ್ಮಣ ಮೂಳೆ ನಿರ್ವಹಿಸಿದರು., ಛಾಯಪ್ಪಾ ವಂದಿಸಿದರು.