• first
    second
    third
    previous arrow
    next arrow
  • ಪರಿಷತ್ ಅಭ್ಯರ್ಥಿ ಭೀಮಣ್ಣ ಪರ ಮತಯಾಚಿಸಿದ ಪ್ರಶಾಂತ ದೇಶಪಾಂಡೆ

    300x250 AD


    ಮುಂಡಗೋಡ: ಮೊದಲು ನಮ್ಮ ಪಕ್ಷದ ಸೈನ್ಯ ಗಟ್ಟಿಯಾಗಿರಬೇಕು. ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಸಭೆಯಲ್ಲಿ ಕಾರ್ಯಕರ್ತರಿಗೆ ಶಿಸ್ತಿನ ಪಾಠ ಹೇಳಿದರು.


    ಅವರು ಭಾನುವಾರ ಸಂಜೆ ಪಟ್ಟಣದ ಖಾಸಗಿ ಹೊಟೇಲ್‍ನ ಸಭಾ ಭವನದಲ್ಲಿ ಕಾರ್ಯಕರ್ತರ ಸಭೆ ಮತ್ತು ವಿಧಾನ ಪರಿಷತ್ ಅಭ್ಯರ್ಥಿ ಭೀಮಣ್ಣ ಪರ ಮತಯಾಚಿಸಿ ಮಾತನಾಡುತ್ತಿದ್ದರು, ಮುಂದೆ ನಡೆಯುವ ಪ್ರತಿಯೊಂದು ಚುನಾವಣೆಯಲ್ಲಿ ಹಣ ಹಾಗೂ ಗುಣದ ಮೇಲೆ ಚುನಾವಣೆ ನಡೆಯಲಿದ್ದು ಕೊನೆಗೆ ಮತದಾರರು ಹಣವನ್ನು ತಿರಸ್ಕರಿಸಿ ಗುಣ ಇರುವ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ.

    ಮೂಲಸೌಕರ್ಯಕ್ಕೆ ಕೋಡಬೇಕಾದ ಹಣ ರಾಜಕಾರಣಿಗಳ ಜೇಬಿನಲ್ಲಿ ಸೇರುತ್ತಿದೆ. ತಾಲೂಕಿನ ಗಟಾರ, ಸಿಮೆಂಟ್ ತೀರಾ ಕಳಪೆ ಮಟ್ಟದಲ್ಲಿ ಕೂಡಿದೆ. 20-20 ಯೋಜನೆಯಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅದು ಯಾವ ಯೋಜನೆ ಎಂದರೆ ಕಾಮಗಾರಿ ಮಾಡುವಾಗ 20% ಕಮಿಷನ್ ಕೊಡುವ ಯೋಜನೆಯಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು ಈ ಬಗ್ಗೆ ನಮ್ಮ ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ ಎಂದರು.

    ಗೊಂದಲದ ಸಭೆ: ಪ್ರಶಾಂತ ದೇಶಪಾಂಡೆ ಮಾತನಾಡುತ್ತಿದ್ದಂತೆ ಪ.ಪಂ ಸದಸ್ಯರ ಮತ ಹಾಕಲು ನಾವು ಬೇಕು ವೇದಿಕೆ ಮೇಲೆ ಕುಳಿತುಕೊಳ್ಳಲು ಬೇರೆ ಅವರು ಬೇಕು. ಯಾವುದೇ ಸಭೆ ಸಮಾರಂಭದಲ್ಲಿ ನನ್ನ ಪತ್ನಿಯನ್ನು ವೇದಿಕೆ ಮೇಲೆ ಕರೆಯುವುದಿಲ್ಲ. ಬರಿ ಒಂದೆರಡು ಸದ್ಯಸರನ್ನು ಅμÉ್ಟೀ ಕರೆದು ಕುಳಿಸುತ್ತೀರಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಮತ್ತೆ ಕೆಲ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಖಂಡರು ಯಾವ ಕಾರ್ಯಕ್ರಮಕ್ಕೆ ತಿಳಿಸುವುದಿಲ್ಲ ಹೀಗಾದರೆ ಪಕ್ಷ ಸಂಘಟನೆ ಆಗುವುದು ಹೇಗೆ ಎಂದು ಪ್ರಶ್ನೆಸಿದರು. ಕಾರ್ಯಕರ್ತನೊಬ್ಬ, ನಾನು ಪಕ್ಷದ ನಿಷಥವಂತ ಕಾರ್ಯಕರ್ತ ಆದರೆ ಪ.ಪಂ ಚುನಾವಣಿಗೆ ಅಭ್ಯರ್ಥಿಯಾಗಲು ನಮ್ಮ ಪಕ್ಷದ ಮುಖಂಡರೇ ನನ್ನ ಬಳಿ 35,000ರೂ ಹಣ ಪಡೆದಿದ್ದಾರೆ ಎಂದು ಹೇಳುತ್ತಿದ್ದಂತೆ ವೇದಿಕೆ ಮೇಲಿಂದ ಮುಖಂಡರು ಅವರ ಹೆಸರು ಬಹಿರಂಗ ಪಡಿಸುವಂತೆ ಆಗ್ರಹಿಸಿದಾಗ ಪ್ರಶಾಂತ ದೇಶಪಾಂಡೆ ಮಧ್ಯ ಪ್ರವೇಶಿಸಿ ಪಕ್ಷದ ಕಾರ್ಯಕ್ರಮಗಳಲ್ಲಿ ಅಶಿಸ್ತು ಸಹಿಸುವುದಿಲ್ಲ. ಪಕ್ಷದಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಎಲ್ಲ ಚುನಾವಣೆಗಳನ್ನು ಗೆಲ್ಲಬಹುದು. ನಾವೇ ಕಚ್ಚಾಡಿದರೆ ಪಕ್ಷ ಸಂಘಟನೆ ಆಗುವುದು ಹೇಗೆ ನಿಮ್ಮ ವೈಕ್ತಕ ವಿಚಾರವನ್ನು ಸಭೆಯಲ್ಲಿ ಮಾತಾಡಬೇಡಿ. ಪ್ರತ್ಯೇಕವಾಗಿ ನನ್ನ ಬಳಿ ಚರ್ಚಸಿ ಪಕ್ಷದ ನಾಯಕರ ಹತ್ತಿರ ಮಾತನಾಡಿ. ಪಕ್ಷದ ಅಭಿಮಾನ ಇದ್ದವರು ಕಾರ್ಯಕ್ರಮದ ಮಾಹಿತಿ ತಿಳಿದರೆ ಸಭೆಗೆ ಬರುತ್ತಾರೆ. ಆಗ ಮಾತ್ರ ಸಂಘಟನೆ ಮಾಡಲು ಸಾಧ್ಯ ಎಂದು ಗದರುತ್ತಿದ್ದಂತೆ ಕಾಂiರ್Àಕರ್ತರು ಮೌನಕ್ಕೆ ಶರಣಾದರು.

    300x250 AD


    ಪಕ್ಷದ ಕಾರ್ಯಾಕರ್ತರು ಮುಖಂಡರ ಮೊದಲು ಶಿಸ್ತಿನಿಂದ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ವಿಧಾನ ಪರಿಷತ್ ಚುನಾವಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೀಮಣ್ಣ ಅವರು ಸ್ಪರ್ಧಿಸಿದ್ದಾರೆ ನಿಮ್ಮ ಮತದ ಜೊತೆಗೆ ಬೇರೆ ಪಕ್ಷದ ಸದಸ್ಯರನ್ನು ಮನವೊಲಿಸಿ ಅವರಿಗೆ ಮತ ಹಾಕಿಸಬೇಕೆಂದು ತಿಳಿಸಿದರು.


    ಜಿ.ಪಂ ಮಾಜಿ ಅಧ್ಯಕ್ಷ ರಾಮಕೃಷ್ಣಮೂಲಿಮನಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ವಾದಿರಾಜ ಮತ್ತು ಎಮ.ಎನ್ ದುಂಡಸಿ ಮಾತನಾಡಿದರು. ಎಚ್.ಎಂ.ನಾಯ್ಕ, ಲಕ್ಷ್ಮಣ ಬನ್ಸೋಡೆ, ಧರ್ಮರಾಜ ನಡಗೇರ, ರಾಜು ಭೋವಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Back to top