ಮುಂಡಗೋಡ: ಪಟ್ಟಣದ ಬ್ಲೂಮಿಂಗ್ ಬಡ್ಸ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಕೀರ್ತಿ ಹುದ್ಲಮನಿ ಹಾಕಿ ಸ್ಕೇಟಿಂಗ್‍ನ ಸಬ್ ಜೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ಬಸವನ ಬೀದಿಯ ಸ್ಟೇಶನರಿ ವ್ಯಾಪಾರಿ ಸುರೇಶ ಹುದ್ಲಮನಿ ಅವರ ಪುತ್ರಿ ಕೀರ್ತಿ. ನ.25ರಂದು ಯಲ್ಲಾಪುರದಲ್ಲಿ ಜರುಗಿದ 7ರಿಂದ11 ವರ್ಷದೊಳಗಿನ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಇವಳು ಭಾಗವಹಿಸಿ ರಾಷ್ಟ್ರ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಡಿ.13ರಿಂದ ಡಿ.22ರವರೆಗೆ ಪಂಜಾಬ್‍ನ ಮೊಹಾಲಿಯಲ್ಲಿ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿ ನಡೆಯಲಿವೆ. ಕೈಗಾದ ದಿಲೀಪ ಹಣಬರ ಮತ್ತು ಸಚಿನ ದೇಸಾಯಿ ಅವರ ಬಳಿ ಕಳೆದ ಒಂದು ವರ್ಷದಿಂದ ಕೀರ್ತಿ ಹಾಕಿ ತರಬೇತಿ ಪಡೆಯುತ್ತಿದ್ದಾಳೆ.