ಕಾರವಾರ: ಕಾಜುಭಾಗದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಗಾಗಿ ಲಾಯನ್ಸ್ ಕ್ಲಬ್ ಕಾರವಾರ ವತಿಯಿಂದ ಮೆಡಿಕಲ್ ಕಾಲೇಜ್ ಹಾಗೂ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದೊತ್ತಡ ತಪಾಸಣೆ ಸೇರಿದಂತೆ ಮಧುಮೇಹ ಜಾಗೃತಿ ಮತ್ತು ಪತ್ತೆ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಧುಮೇಹ ಜಾಗೃತಿ ಕರಪತ್ರಗಳನ್ನು ಸಹ ಹಂಚಲಾಯಿತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ವೆಂಕಟೇಶ ಆರ್. ಈ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಮೀಸಲು ಪೊಲೀಸ್ ಪಡೆ ಇನ್ಸ್‍ಪೆಕ್ಟರ್ ಫಕೀರಪ್ಪ ಆರ್.ಡಿ. ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಡಾ. ರಾಧಿಕಾ ಹರಿಕಂತ್ರ, ಸಿಸ್ಟರ್ ನಾಗರತ್ನ ಹಾಗೂ ಸಂಗಡಿಗರು ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು. ಲಾಯನ್ಸ್ ಕ್ಲಬ್ಬಿನ ಯೋಜನಾ ಅಧ್ಯಕ್ಷ ಲಾಯನ್ ಲಕ್ಷ್ಮೀಕಾಂತ ಪ್ರಭು ಹಾಗೂ ಕ್ಲಬ್ಬಿನ ಇತರ ಸದಸ್ಯರು ಹಾಜರಿದ್ದರು. ಸಾಕಷ್ಟು ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದರು.