• first
  second
  third
  previous arrow
  next arrow
 • ಅಕೇಶಿಯಾ ಮರಗಳ ಅಸಮರ್ಪಕ ನಿರ್ವಹಣೆ; ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

  300x250 AD


  ಹೊನ್ನಾವರ: ಅಕೇಶಿಯಾ ಮರಗಳು ಬಹು ಎತ್ತರಕ್ಕೆ ಬೆಳೆದು ನೀಮತಿದ್ದು, ಅರಣ್ಯ ಇಲಾಖೆಯು ಅದನ್ನು ಸಮರ್ಪಕವಾಗಿ ಕಟಾವು ಮಾಡುತ್ತಿಲ್ಲ. ಇದರಿಮದಾಗಿ ತಾಲೂಕಿನ ಹಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಈ ಸಮಸ್ಯೆ ಪರಿಹಾರ ಮಾಡಿಕೊಡುವಂತೆ ಸಂಕೊಳ್ಳಿ, ಬರಗದ್ದೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಸಂಕೊಳ್ಳಿ ಮತ್ತು ಬರಗದ್ದೆ ಗ್ರಾಮಗಳ ವಿದ್ಯುತ್‍ನ್ನು ಸಂಪರ್ಕಿಸುವ ಟ್ರಾನ್ಸ್‍ಫಾರ್ಮರ್‍ಗಳ ವಿದ್ಯುತ್ ಲೈನ್ ಮಾರ್ಗವು ಸರ್ಕಾರಿ ಅರಣ್ಯ ಪ್ರದೇಶದಲ್ಲೇ ಹಾದು ಹೋಗಿದೆ. ಅರಣ್ಯ ಇಲಾಖೆಯು ಪ್ರತೀ ಬಾರಿಯೂ ಮರಗಳ ಕಟಾವಿನ ಸಂದರ್ಭ ವಿದ್ಯುತ್ ಲೈನ್ ಸಮೀಪದ ಮರಗಳನ್ನು ಕಟಾವು ಮಾಡದೇ ಹಾಗೆಯೇ ಬಿಡುತ್ತಿದ್ದು ಇದರಿಂದ ಮಳೆಗಾಲದಲ್ಲಿ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು ಈ ಭಾಗದ ಜನತೆಗೆ ವಿದ್ಯುತ್ ಸಮಸ್ಯೆ ತಲೆದೋರಲಿದೆ. ಆದ್ದರಿಂದ ಸಂಬಂಧಪಟ್ಟವರು ಶೀಘ್ರ ಸಮಸ್ಯೆ ಪರಿಹರಿಸಬೇಕೆಂದು ಸಂಕೊಳ್ಳಿ, ಬರಗದ್ದೆ ಗ್ರಾಮಸ್ಥರು ವಿನಂತಿಸಿದ್ದಾರೆ.

  300x250 AD

  ಅಕೇಶಿಯಾ ಮರಗಳಿಗೆ ಭೂಮಿಯ ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವಿಲ್ಲದಿರುವುದರಿಂದ ಆಗಾಗ ಧರಾಶಾಹಿಯಾಗುತ್ತಿರುತ್ತದೆ. ಈ ಹಿಂದೆ ಕಡುಬೇಸಿಗೆಯಲ್ಲೇ ಅಕೇಶಿಯಾ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿ ವಾರಗಟ್ಟಲೇ ಕೃಷಿ ಜಮೀನಿಗೆ ನೀರು ಹಾಯಿಸಲು ಕಾದ ಘಟನೆ ಜರುಗಿದೆ. ಅರಣ್ಯ ಇಲಾಖೆಯು ಅಸಡ್ಡೆ ಬಿಟ್ಟು ರೈತರ ನೆರವಿಗೆ ಧಾವಿಸಲಿ ಎಂದು ಹಳದೀಪುರ ರೈತ ಶಕ್ತಿ ಗುಂಪಿನ ಸದಸ್ಯ ಸುಬ್ರಹ್ಮಣ್ಯ ಜೋಶಿ ಸಂಕೊಳ್ಳಿ ಆಗ್ರಹಿಸಿದ್ದಾರೆ.

  Share This
  300x250 AD
  300x250 AD
  300x250 AD
  Back to top