• Slide
  Slide
  Slide
  previous arrow
  next arrow
 • ನೀರಿನ ಟ್ಯಾಂಕಿಗೆ ಬಿದ್ದ 2 ಆಕಳು; ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ರಕ್ಷಣೆ

  300x250 AD

  ಅಂಕೋಲಾ: ಪಟ್ಟಣದ ವಿಠ್ಠಲ ಘಾಟ್ ಹತ್ತಿರದ ಗುಡ್ಡದ ಮೇಲಿರುವ ಖಾಲಿ ನಿರುಪಯುಕ್ತ ನೀರಿನ ಟ್ಯಾಂಕಿನಲ್ಲಿ ಬಿದ್ದ ಎರಡು ಆಕಳುಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

  ಹಳೆಯದಾದ 16 ಅಡಿ ಆಳದ ಈ ನೀರಿನ ಟ್ಯಾಂಕಿನ ಮೇಲು ಭಾಗದ ಎರಡೂ ಕಡೆಗಳಲ್ಲಿ ಬಾಯಿ ತೆರೆದುಕೊಂಡ ಸ್ಥಿತಿಯಲ್ಲಿರುವುದು ಅಪಾಯಕ್ಕೆ ಕಾರಣವಾಗುತ್ತಿದ್ದು, ಮೇಯಲು ಬಂದ ಆಕಳುಗಳು ಆಯ ತಪ್ಪಿ ಟ್ಯಾಂಕ್ ಒಳಗೆ ಬಿದ್ದಿದ್ದವು.

  300x250 AD

  ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಕಳುಗಳನ್ನು ಸುರಕ್ಷಿತವಾಗಿ ಮೇಲೆತ್ತಿದರು. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಉಮೇಶ್ ನಾಯ್ಕ ಸಿಬ್ಬಂದಿಗಳಾದ ಜೇವನ ಜೆ. ಬೊಬ್ರುಕರ, ಗಜಾನನ ದೇವಾಡಿಗ ತಿಪ್ಪಣ್ಣ ವಿ. ನಾಯಕ, ರಾಮಪ್ಪ ಎಂ. ಇಂಗಳಗಿ, ಗಜೇಂದ್ರ ಬೊಬ್ರುಕರ, ಮಂಜುನಾಥ ಎನ್. ನಾಯಕ ಮೊದಲಾದವರು ಪಾಲ್ಗೊಂಡಿದ್ದರು.

  ಶಾಂತಾರಾಮ ಹುಲಸ್ವಾರ ಮತ್ತು ಸ್ಥಳೀಯ ಯುವಕರು ಸಹಕರಿಸಿದರು. ಪುರಸಭೆ ಮುಖ್ಯಾಧಿಕಾರಿ ಹಾಗೂ ನೀರು ಸರಬರಾಜು ವಿಭಾಗದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top