ಭಟ್ಕಳ: ಗ್ರಾಮ ಪಂಚಯತಕ್ಕೆ ಹೊಸದಾಗಿ ಆಯ್ಕೆಯಾದವರು ಅನುದಾನದ ಕೊರತೆಯಿಂದ ಅಭಿವೃದ್ಧಿ ಮಾಡಲಾಗದೇ ಜನರಿಂದ ಮಾತುಕೇಳುವ ಪರಿಸ್ಥಿತಿ ಬಂದಿದೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತಗಳಿಗೆ ಹೆಚ್ಚಿನ ಮನೆಗಳನ್ನು ಮಂಜೂರಿ ಮಾಡಿದ್ದರು. ಈಗಿನ ಸರಕಾರ ಅಂತಹ ಮನೆಗಳ ಬಿಲ್ ಪಾವತಿಯನ್ನೂ ಸಹ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್‍ಚುನಾವಣಾ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.
ಅವರು ಇಲ್ಲಿನ ಖಾಸಗೀ ಹೋಟಿಲ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕೇಂದ್ರ ಮತ್ತುರಾಜ್ಯ ಸರಕಾರಗಳು ಗ್ರಾಮ ಪಂಚಾಯತಿಗೆ ಅನುದಾನ ನೀಡದೇ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿದೆ. ರಾಜೀವಗಾಂಧಿ ಪ್ರಧಾನಮಂತ್ರಿ ಇದ್ದ ಸಂದರ್ಭದಲ್ಲಿ ಪಂಚಾಯತರಾಜ್ ವ್ಯವಸ್ಥೆ ಬಲಪಡಿಸುವ ಕನಸಿನೊಂದಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಿದ್ದರು. ಆದರೆ ಬಿಜೆಪಿ ಸರಕಾರ ಪಂಚಾಯತರಾಜ್ ವ್ಯವಸ್ಥೆ ಕುರಿತ ನಂಬಿಕೆ ಇಲ್ಲದಂತೆ ಮಾಡಿದ್ದು ಸದಸ್ಯರನ್ನು ಜನರು ಸಂಶಯದಿಂದ ನೋಡುವಂತಾಗಿದೆ. ಅನುದಾನ ಬಿಡುಗಡೆ ಮಾಡುವಲ್ಲಿ ಹಿಂದೇಟು ಹಾಕಿರುವುದು ಸದಸ್ಯರಾಗಿ ಆಯ್ಕೆಯಾದವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದರು.
ಸರಕಾರದ ಬಿಲ್ ನಂಬಿ ಮನೆ ಕಟ್ಟಿಕೊಂಡವರು ಸಾಲ ಮಾಡಿ ಮನೆ ಪೂರ್ಣಗೊಳಿಸುವಂತಾಗಿದೆ. ರಾಜ್ಯ ಮತ್ತುಕೇಂದ್ರದ ಬಿಜೆಪಿ ಸರಕಾರದಜನವಿರೋಧಿ ನೀತಿಯಿಂದಜನರು ತತ್ತರಿಸಿ ಹೋಗಿದ್ದಾರೆ. ಸರಕಾರದ ದುರಾಡಳಿತ ನೋಡಿಜನರು ರೋಸಿ ಹೋಗಿದ್ದಾರೆ. ತಾಲೂಕು ಮತ್ತು ಜಿಲ್ಲಾ ಪಂಚಾಯತ್‍ಚುನಾವಣೆ ನಡೆಸಿದರೆ ತಮಗೆ ಸೋಲು ಖಚಿತಎಂದು ತಿಳಿದ ರಾಜ್ಯದ ಬಿಜೆಪಿ ಸರಕಾರಕ್ಷೇತ್ರ ವಿಂಗಡನೆ ನೆಪದಲ್ಲಿತಾ.ಪಂ., ಜಿ.ಪಂ. ಚುನಾವಣೆಯನ್ನು ಮುಂದೂಡಿದೆ ಎಂದರು.
ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿಕಾಂಗ್ರೆಸ್ ವಿಧಾನ ಪರಿಷತ್ ಸ್ಥಾನದಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದು ಈ ಬಾರಿಯೂ ನಮಗೇ ಗೆಲುವು ನಿಶ್ಚಿತ. ಗ್ರಾ.ಪಂ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್ ಸದಸ್ಯರುಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟುಗೆಲ್ಲಿಸಲಿದ್ದಾರೆಎನ್ನುವ ನಂಬಿಕೆ ಇದೆ. ಈಗಾಗಲೇ ಜಿಲ್ಲಾದ್ಯಂತ ಪ್ರಚಾರಕಾರ್ಯ ಆರಂಭಿಸಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ. ನಮ್ಮ ಪಕ್ಷದಲ್ಲಿಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲಾ ಮುಖಂಡರೂಒಗ್ಗಟ್ಟಾಗಿ ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ. ಡಿ. ನಾಯ್ಕ, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಸಂತೋಷ ನಾಯ್ಕ, ಜಿ.ಪಂ. ಮಾಜಿಅಧ್ಯಕ್ಷೆ ಜಯಶ್ರೀ ಮೊಗೇರ, ಪ್ರಮುಖರಾದರಾಮಾ ಮೊಗೇರ, ವನಿತಾ ನಾಯ್ಕ, ಪಕ್ಷದಉಸ್ತುವಾರಿ ಸುಬ್ರಹ್ಮಣ್ಯ ನಾಯ್ಕ, ಜಿಲ್ಲಾಕಾಂಗ್ರೆಸ್‍ಅಲ್ಪಸಂಖ್ಯಾತರ ವಿಭಾಗದಅಧ್ಯಕ್ಷಅಬ್ದುಲ್ ಮಜೀದ್ ಶೇಖ್, ಪುರಸಭೆಅಧ್ಯಕ್ಷ ಪರ್ವೇಜ್ ಕಾಶೀಮಜಿ, ತಾಲೂಕುಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಷ್ಣುದೇವಡಿಗ ಮುಂತಾದವರಿದ್ದರು.