ಭಟ್ಕಳ: ಕ್ಯಾನ್ಸರ್ ರೋಗದಿಂದ ಬಳಲಿ ಮೃತನಾದ ಬಸ್ತಿಮಕ್ಕಿಯ ಅಶೋಕ ಮಂಜಯ್ಯ ದೇವಾಡಿಗ ಅವರ ಕುಟುಂಬಕ್ಕೆ ಭಟ್ಕಳದ ಅಪೂರ್ವ ಸಂಗಮ 1994 ರ ನ್ಯೂ ಇಂಗ್ಲಿಷ್ ಶಾಲೆಯ ಎಸ್‍ಎಸ್‍ಎಲ್‍ಸಿ ವಾಟ್ಸಪ್ ಗ್ರೂಪ್ ಸದಸ್ಯರು ಸಹಾಯ ಧನ ನೀಡಲಾಯಿತು.
ಮೃತ ಅಶೋಕ ಕುಟುಂಬ ತೀರಾ ಬಡವರಾಗಿದ್ದರಿಂದ ಅವರ ಜೀವನೋಪಾಯಕ್ಕೆ ಸಹಾಯವಾಗಲೆಂದು ಅಪೂರ್ವ ಸಂಗಮ ಗ್ರೂಪನ್ ಸದಸ್ಯರು ಅವರ ಮನೆಗೆ ಬೇಟಿ ನೀಡಿ, ಅವರ ಕುಟುಂಬಕ್ಕೆ ದೈರ್ಯ ತುಂಬಿ, ಧನ ಸಹಾಯ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರೂಪ್‍ನ ನಿರ್ವಾಹಕ ನಾಗರಾಜ ನಾಯ್ಕ, ದಿನೇಶ ನಾಯ್ಕ, ಉಮೇಶ ಬಾಳಗಿ, ರವಿ ನಾಯ್ಕ, ಗಣೇಶ ನಾಯ್ಕ ಹಾಗೂ ಶ್ರೀದರ ಬಾಗಲ್ ಉಪಸ್ಥಿತರಿದ್ದರು.