ಕಾರವಾರ: ಬಡವ-ಕೀಳು-ಶ್ರೀಮಂತ ಎಂದೆಲ್ಲ ನೋಡದೆ ಸಂವಿಧಾನವು ಎಲ್ಲರಿಗೂ ಸಮಾನತೆ ನೀಡಿದೆ. ನ್ಯಾಯಾಂಗ, ಶಾಸಕಾಂಗ,ಕಾಯಾರ್ಂಗ ಸಹ ಸಂವಿಧಾನದ ಅಡಿ ಕೆಲಸ ಮಾಡಬೇಕು ಅದೇ ನಮ್ಮ ಸಂವಿಧಾನದ ಸೊಗಸು ಎಂದು ಎಂದು ಪ್ರಾಂಶುಪಾಲೆ ವಿಜಯಾ ಡಿ.ನಾಯ್ಕ ಅಭಿಪ್ರಾಯ ಪಟ್ಟರು.
ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಫೀಲ್ಡ್‍ಔಟ್‍ರೀಚ್ ಬ್ಯೂರೋ, ಶಿವಮೊಗ್ಗ, ಮಿನಿಸ್ಟರ್ ಆಫ್‍ಇನ್ಪಾರ್ಮೇಶನ್ ಆ್ಯಂಡ್ ಬ್ರಾಡ್‍ಕಾಸ್ಟಿಂಗ್ ಇವರಿಂದ ಏರ್ಪಟ್ಟ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನದ ವಿಶಾಲ ವೃಕ್ಷದಡಿ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಮಹಿಳೆಗೆ ಸಮಾನತೆ ಸ್ವಾತಂತ್ರ್ಯಕೊಟ್ಟಿದೆ. ಧಾರ್ಮಿಕ ಆಚರಣೆಗಳಿಗೆ ಸ್ವಾತಂತ್ರ್ಯವಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ವಕೀಲೆ ರಾಜೇಶ್ವರಿ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕತೆಯ ಮುಖವಾಡಕ್ಕೆ ಬಲಿಯಾಗದಿರಿ. ಪ್ರಕೃತಿ ಬಗ್ಗೆ ಪ್ರೀತಿಇರಲಿ. ಸಂವಿಧಾನ ಗೌರವಿಸಿ ಎಂದರು. ಸಂವಿಧಾನ ನೀಡಿದ ಹಕ್ಕು, ಸ್ವಾತಂತ್ರ್ಯ, ಜಾವಾಬ್ದಾರಿ ಬಗ್ಗೆ ವಿವರಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಫೀಲ್ಡ್‍ಔಟ್‍ರೀಚ್ ಬ್ಯೂರೋದಕ್ಷೇತ್ರಪ್ರಚಾರಅಧಿಕಾರಿ ಜಿ. ತುಕಾರಾಮಗೌಡ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ದಿನ. ಈ ದಿನದ ಮಹತ್ವಯುವಜನರು ತಿಳಿದುಕೊಳ್ಳಬೇಕು. ಪ್ರಜೆಗಳ ಹಕ್ಕು, ಕರ್ತವ್ಯ, ಜವಾಬ್ದಾರಿಯನ್ನು ಹೇಳುತ್ತದೆ ಎಂದರು. ಸರಕಾರ ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆಅನುಗುಣವಾಗಿರಬೇಕು ಎಂದರು.
ಸಂವಿಧಾನದ ಪೀಠಿಕೆ ಆಶಯಗಳನ್ನು ಉಪನ್ಯಾಸಕಿ ಸುಮಯ್ಯ ಸಯ್ಯದ್ ವಿದ್ಯಾರ್ಥಿಗಳಿಗೆ ಬೋಧಿಸಿದರು.
ಸಂವಿಧಾನ ಅರ್ಪಣೆ ದಿನದ ಅಂಗವಾಗಿ ನಡೆದ ಭಾಷಣ, ಚಿತ್ರ ಹಾಗೂ ರಂಗೋಲಿ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಿದ್ದಿ ಯುವತಿಯರತಂಡದಿಂದ ಸಿದ್ದಿ ಸಂಪ್ರದಾಯಿಕ ನೃತ್ಯ ನಡೆಯಿತು. ಹಾಗೂ ಅಂಬೇಡ್ಕರ್‍ಕುರಿತು ಸಿದ್ದಿ ತಂಡ ಹಾಡು ಹೇಳಿದರು. ವಾರ್ತಾಇಲಾಖೆಯ ಸಹಾಯಕಿಕಸ್ತೂರಿ ಪಾಟೀಲ, ಉಪನ್ಯಾಸಕರಾದ ವಿದ್ಯಾ ನಾಯಕ, ಶಿವಾನಂದ ಭಟ್, ಸಂಜೋತಾಇದ್ದರು. ಫೀಲ್ಡ್‍ಔಟ್‍ರೀಚ್ ಬ್ಯೂರೋದಅಧಿಕಾರ ಲಕ್ಷ್ಮಿಕಾಂತ ವಂದಿಸಿದರು.