ಶಿರಸಿ: 61 ವರ್ಷಗಳ ಸೇವೆ ಪೂರೈಸಿದ ಸಮಾಧಾನದೊಂದಿಗೆ 62ನೇ ವರ್ಷದ ಸೇವೆಗೆ ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಸಜ್ಜಾಗಿದೆ. ವರ್ಷದಲ್ಲಿ ಕರೋನಾ ವ್ಯಾಧಿಯ ಕರಾಳಛಾಯೆ ಆವರಿಸಿ ಹಲವಾರು ಸಮಸ್ಯೆ ಎದುರಾಯಿತಾದರೂ ಸಂಕಷ್ಟಗಳ ನಡುವೆಯೂ ಸಮಾಧಾನಕರ ಪ್ರಗತಿ ಸಾಧಿಸಿದ ಭಾವನೆ ನಮ್ಮದು. ಅಲ್ಲದೇ ನ.19ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಂಘದ ಪ್ರಧಾನ ಕಛೇರಿಯಲ್ಲಿ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲಿದೆ ಎಂದು ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದ್ದಾರೆ.
ನಮ್ಮ ವಿಸ್ತಾರ ಕಾರ್ಯಕ್ಷೇತ್ರದ ಸದಸ್ಯರು ಸಂಘವು ಒದಗಿಸಿದ ವಿವಿಧ ಸೇವೆಗಳ ವ್ಯವಹಾರಗಳಲ್ಲಿ ಭಾಗವಹಿಸಿ ಪ್ರೋತ್ಸಾಹಿದ್ದೀರಿ. ದೇವನಳ್ಳಿ, ಬೆಣಗಾಂವ ಶಾಖೆಗಳ ಮೂಲಕವೂ ವ್ಯವಹರಿಸಿ ಬೆಂಬಲ ನೀಡಿದ್ದೀರಿ. ಇನ್ನೂ ಹೆಚ್ಚು ವಿಧದ ವ್ಯವಹಾರದಲ್ಲಿ ಇನ್ನೂ ಹೆಚ್ಚು ಸದಸ್ಯರು ಪಾಲ್ಗೊಳ್ಳಬೇಕೆಂಬ ಆಶಯ ನಮ್ಮದು.
ಸಂಘದ ಕಾರ್ಯಕ್ಷೇತ್ರದ ಪ್ರಧಾನ ಬೆಳೆಯಾದ ಅಡಿಕೆ ಬೆಳೆಯ ದರ ಈ ವರ್ಷ ಉತ್ತಮವಾಗಿತ್ತು. ಮೊದಲು ಕೆಂಪಡಿಕೆ ದರ ಪ್ರಗತಿಯಲ್ಲಿತ್ತು ನಂತರ ಚಾಲಿ ದರವೂ ಏರಿಕೆ ಕಂಡಿತು. ಸ್ವಲ್ಪ ಕೊಳೆರೋಗ ಬಾಧಿಸಿದರೂ ದರ ಸಮಾಧಾನಕರವಿರುವದರಿಂದ ಅಂತಹ ದುಷ್ಪರಿಣಾಮ ಆಗಲಿಲ್ಲ ಎನ್ನಬಹುದು. ಉತ್ತಮ ಬೆಲೆಯು ಭವಿಷ್ಯಕ್ಕೆ ಬುನಾದಿಯಾಗುವಂತೆ ಸದಸ್ಯರು ಸದುಪಯೋಗವಾಗುವಂತೆ ಬಳಸಿಕೊಳ್ಳಲಿ ಎಂದು ಅಪೇಕ್ಷಿಸುತ್ತೇವೆ.
ರೈತರು ತಜ್ಞರ ಕೃಷಿ ಸಲಹೆಗಳನ್ನು ಪಡೆದು, ತಮ್ಮ ಪಾರಂಪರಿಕ ಅನುಭವಗಳನ್ನೂ ಹೊಂದಿಸಿ ತಮ್ಮ ಉತ್ಪನ್ನ ಹೆಚ್ಚಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಮಣ್ಣುಪರೀಕ್ಷೆಯ ನಂತರದಲ್ಲಿ ಸರಿಯಾದ ಪೋಷಕಾಂಶಗಳನ್ನು ಭೂಮಿಗೆ ನೀಡುವದು ಅವಶ್ಯಕ. ಇದಕ್ಕಾಗಿ ಟಿ.ಎಸ್.ಎಸ್.ನವರು ಕೊಡುವ ಉಚಿತ ಕೃಷಿ ಸಲಹೆಯ ಪ್ರಯೋಜನ ಪಡೆಯಬಹುದಾಗಿದೆ. ನಮ್ಮ ಭತ್ತ ಬೆಳೆಗಾರ ಸದಸ್ಯರು ಸಮಸ್ಯೆಯಲ್ಲಿದ್ದು ಅವರಿಗೆ ಆಯಾ ಭೂಗುಣಕ್ಕನುಗುಣವಾಗಿ ಒಂದೇ ಜಾತಿಯ ಭತ್ತವನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆದು ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಪ್ರಯತ್ನಿಸೋಣ ಎಂದು ಭರವಸೆ ನೀಡುತ್ತಿದ್ದೇವೆ. ವನ್ಯಪ್ರಾಣಿಗಳ ಕಾಟದಿಂದ, ರೋಗಗಳಿಂದ ಉಪಬೆಳೆಗಳಿಗೆ ತೊಡಕುಗಳಿವೆಯಾದರೂ ಬಾಳೆ, ಕಾಳುಮೆಣಸು, ಯಾಲಕ್ಕಿ, ಕೋಕೋ, ವೆನಿಲಾ, ಕಾಫಿ ಹೀಗೆ ಉಪಬೆಳೆಗಳನ್ನು ಬೆಳೆಯುವವರಿಗೆ ನಮ್ಮಿಂದ ಅಗತ್ಯ ಪ್ರೋತ್ಸಾಹ ನೀಡುತ್ತೇವೆ ಅಂತ ಭರವಸೆ ನೀಡುತ್ತೇವೆ.
ನಮ್ಮ ಸಂಘದ ವ್ಯಾಪ್ತಿಯಲ್ಲಿ ವಿವಧ ನುರಿತ ಕೃಷಿ ಕಾರ್ಮಿಕರಿದ್ದರೂ ಇನ್ನೂ ಕಾರ್ಮಿಕರ ಕೊರತೆ ಕಂಡುಬರುತ್ತಿದೆ. ಕೆಲಸದ ವಿಷಯದಲ್ಲಿ ಕಾರ್ಮಿಕರು ಹಾಗೂ ಸದಸ್ಯರ ನಡುವೆ ಕೊಂಡಿಯಾಗಲು ಹಾಗೂ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಲು ಸಿದ್ದರಿದ್ದೇವೆ. 2019-20 ರ ಅವಧಿಯ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರವು ಈ ವರ್ಷ(2020-21 ರಲ್ಲಿ) ಜಮಾ ಆಗಿದ್ದು ಅಡಿಕೆ ಕೊಳೆ ಸಂದರ್ಭದಲ್ಲಿ ತುಸು ಸಹಾಯಕವಾಗಿದೆ. 2018-19 ರ ಸಾಲಮನ್ನಾ ಬಾಬ್ತು ಹೆಚ್ಚಿನ ಮೊತ್ತ ಸದಸ್ಯರಿಗೆ ಜಮಾ ಆಗಿದ್ದರೂ ಸರಕಾರದ ಕ್ಲಿಷ್ಟ ನಿಯಮಗಳಂತೆ, ಮತ್ತು ವ್ಯವಸ್ಥೆಯ ಸಮಸ್ಯೆಗಳಿಂದಾಗಿ 13 ಸದಸ್ಯರ ಮೊತ್ತ ಇನ್ನೂ ಜಮಾ ಆಗದಿರುವದು ವಿಷಾದನೀಯವಾಗಿದೆ.
ರೈತರು ತಮ್ಮ ಕೃಷಿ ಆದಾಯ ಹೆಚ್ಚಿಸಿಕೊಂಡು ವ್ಯವಹಾರದಲ್ಲಿ ಮಿತವ್ಯಯ ಸಾಧಿಸಿ ಸ್ವಾವಲಂಬಿಗಳಾಗಲೆಂದು ಆಶಿಸುತ್ತ ಸಾಲಮರುಪಾವತಿ ಸಾಮರ್ಥ್ಯವನ್ನು ಬೆಳೆಸಿಕೊಂಡು ಸಂಘದಲ್ಲಿಯೂ ಇನ್ನೂ ಹೆಚ್ಚು ವ್ಯವಹಾರ ಕೈಗೊಂಡು ತಾವೂ ಪ್ರಗತಿ ಸಾಧಿಸಿ ಸಂಘದ ಪ್ರಗತಿಗೆ ಕಾರಣರಾಗಬೇಕೆಂದು ವಿನಂತಿಸಿಕೊಳ್ಳುತ್ತೇವೆ.
2020-21 ರ ಸಂಘದ ಪ್ರಗತಿಯನ್ನು ಈ ಕೆಳಗಿನಂತೆ ವಿವರಿಸುತ್ತಿದ್ದೇವೆ.
1) ಸದಸ್ಯತ್ವ :
ವರ್ಷದ ಪ್ರಾರಂಭದಲ್ಲಿ 1145 ಸದಸ್ಯರಿದ್ದು 16 ಸದಸ್ಯರು ಹೊಸ ಸದಸ್ಯತ್ವ ಪಡೆದಿದ್ದಾರೆ ಮತ್ತು 22 ಸದಸ್ಯರು ನಿವೃತ್ತರಾಗಿದ್ದು ಅಂತೂ 6 ಸದಸ್ಯರ ಕಡಿಮೆಯಾಗಿ ವರ್ಷದ ಕೊನೆಯಲ್ಲಿ 1139 ಸದಸ್ಯರಿರುತ್ತಾರೆ. ಎಲ್ಲ ಸದಸ್ಯರು ಈಗಿನ ಸಹಕಾರಿ ಕಾಯಿದೆ ಪ್ರಕಾರ ಸಂಘವು ನಿರ್ದಿಷ್ಟಪಡಿಸಿದ ಕನಿಷ್ಠ ವ್ಯವಹಾರವನ್ನು ಸಂಘದ ಮೂಲಕ ಮಾಡುವುದು ಕಡ್ಡಾಯವಾಗಿದೆ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ.
2) ಶೇರು ಬಂಡವಾಳ:
ಸಂಘದ ಅಧಿಕೃತ ಶೇರು ಬಂಡವಾಳವು 1,60,00,000-00 ಗಳಷ್ಟಿದ್ದು ಸಂದಾಯವಾದ ಶೇರು 1,32,51,770-00 ಗಳಾಗಿರುತ್ತವೆ. ಅರ್ಥಾತ್ ಕಳೆದ ವರ್ಷಕ್ಕಿಂತ 11,48,680-00 ಗಳಷ್ಟು ಹೆಚ್ಚಾಗಿರುತ್ತದೆ. ಕಳೆದ ವರ್ಷಕ್ಕಿಂತ ಈ ವರ್ಷದ ಶೇರು ಬಂಡವಾಳದ ವೃದ್ಧಿಯು ಪ್ರತಿಶತ 9.38 ರಷ್ಟು ಆಗಿರುವುದನ್ನು ಇದು ಸೂಚಿಸುತ್ತದೆ.
3) ಕಾಯ್ದಿಟ್ಟ ನಿಧಿ:
ಸಂಘದ ಕಾಯ್ದಿಟ್ಟ ನಿಧಿಯು ಕಳೆದ ವರ್ಷ ರೂ. 54,30,404.77 ಇದ್ದಿದ್ದು ಈ ವರ್ಷ ರೂ. 58,75,140.49 ಗಳಾಗಿದ್ದು ಶಾಸನ ಬದ್ಧವಾಗಿ ಇದನ್ನು ಸಂಪೂರ್ಣವಾಗಿ ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿ ಇವರಲ್ಲಿ ಹೂಡಿಕೆ ಮಾಡಲಾಗಿದೆ.
4) ಇತರ ನಿಧಿಗಳು:
ಇತರ ನಿಧಿಗಳು ಕಳೆದ ಸಾಲಿನಲ್ಲಿ ರೂ.1,73,85,436.66 ಗಳಷ್ಟಿದ್ದು ಈ ವರ್ಷ ರೂ 1,96,06,145.46ಳಾಗಿರುತ್ತವೆ. ಅಂದರೆ ನಿಧಿಗಳಲ್ಲಿ ಶೇ. 12.77 ರಷ್ಟು ಪ್ರಮಾಣ ಹೆಚ್ಚಾಗಿ ಸಂಸ್ಥೆ ಇನ್ನೂ ಸದೃಢವಾಗಿದೆ.
5) ಡಿಸಿಸಿಬ್ಯಾಂಕ್ ಸಾಲಗಳು:
ವರದಿ ವರ್ಷದ ಕೊನೆಗೆ ಕೆ.ಡಿ.ಸಿ.ಸಿ ಬ್ಯಾಂಕ್‌ಗೆ ಕೊಡತಕ್ಕ ಸಾಲ ಇಂತಿದೆ.
- ಕಿಸಾನ್ ಕ್ರೆಡಿಟ್ ಕಾರ್ಡ ಸಾಲ ರೂ 7,09,09,790.00 (ಸಾಮಾನ್ಯ ಹಿಡುವಳಿ+ಚಿಕ್ಕಹಿಡುವಳಿ) 2. ಮಾಧ್ಯಮಿಕ ಸಾಲ(ಎಲ್ಲ ಉದ್ದೇಶ)ರೂ3,28,80,239.00 ಅಂತೂ ರೂ 10,37,90,029,.00
ವರದಿ ವರ್ಷದಲ್ಲಿ ಪಾವತಿಸಬೇಕಾದ ಬೆಳೆಸಾಲ ರೂ: 6,20,02,751.00-00 ಹಾಗೂ ಮಾಧ್ಯಮಿಕ ಸಾಲದ ಕಂತು ರೂ; 77,30,972.00-00 ಗಳನ್ನು ಮರುಪಾವತಿ ಮಾಡಿ ಬ್ಯಾಂಕಿಗೆ 100% ಮರುಪಾವತಿ ಮಾಡಿದೆ. - ನಬಾರ್ಡ್ ಮಾಧ್ಯಮಿಕ: ಸದಸ್ಯರ ಕೃಷಿಮಾಧ್ಯಮಿಕ ಸಾಲದ ಈ ವರ್ಷದ ಕಂತು ರೂ. 21,58,200.00 ಮರುಪಾವತಿ ಮಾಡಿದ್ದು 31-3-21 ಕ್ಕೆ ರೂ: 14,58,200-00 ಚಾಲ್ತಿಬಾಕಿ ಇರುತ್ತದೆ.
ಎನ್‌ಸಿಡಿಸಿ ಸಾಲ: ಎನ್‌ಸಿಡಿಸಿಯಿಂದ ಪಡೆದಿದ್ದ ಸಾಲಗಳಲ್ಲಿ ಗೋಡೌನ್ ಸಾಲ ರೂ 18,34,628.00 ಹಾಗೂ ದುಡಿಯುವ ಭಂಡವಾಳ ಸಾಲ ರೂ.99,00,000.00 ಗಳನ್ನು ಈ ವರ್ಷ ಮರುಪಾವತಿ ಮಾಡಿದ್ದು ವರ್ಷದ ಕೊನೆಯಲ್ಲಿ ಕ್ರಮವಾಗಿ ರೂ 18,34,628.00 ಮತ್ತು ರೂ. 1,00,000.00 ಬಾಕಿ ಇರುತ್ತದೆ.
ಟಿ.ಎಸ್.ಎಸ್. ಸಾಲ: ದಿ ತೋಟಗಾರ್ಸ್ ಕೋ ಆಪ್. ಸೇಲ್ ಸೊಸೈಟಿ, ಶಿರಸಿ ಇವರಿಂದ ಈ ವರ್ಷದಲ್ಲಿ ಅಂತೂ ರೂ: 14,59,93,357-00ಗಳನ್ನು ಸಾಲ ಪಡೆದಿದ್ದು ಇದರಲ್ಲಿ ರೂ:15,00,31,058-00 ಗಳನ್ನು ಮರುಪಾವತಿ ಮಾಡಿ ವರ್ಷಾಂತ್ಯಕ್ಕೆ ಸಾಲ ಬಾಕಿ ಇಲ್ಲವಾಗಿದ್ದು ರೂ:46,79,731.00 ಜಮಾ ಇರುತ್ತದೆ.
7) ಇತರ ವಿಭಾಗ:
ಮುಂಡಗನಮನೆ ಕಿರಾಣಿ ವಿಭಾಗದಲ್ಲಿ ರೂ: 20,470-88, ದೇವನಳ್ಳಿ ಶಾಖೆಯಲ್ಲಿ ರೂ: 39,543.42 ಹಾಗೂ ಬೆಣಗಾಂವ್ ಶಾಖೆಯಲ್ಲಿ ರೂ:25,680.51 ಲಾಭವಾಗಿರುತ್ತದೆ. ಆದರೆ ವಾಹನ ವಿಭಾಗದಲ್ಲಿ ರೂ 2,25,802.84 ಗಳಷ್ಟು ಹಾನಿಯಾಗಿರುತ್ತದೆ. ಹಾಗೂ ಅಂತೂ ಮೂರು ವ್ಯಾಪಾರ ವಿಭಾಗಗಳಿಂದ ಕಿರಾಣಿ ವಿಕ್ರಿ ರೂ4,,13,61,461-34 ಗಳಾಗಿರುತ್ತವೆ. ಇದು ಸಮಾಧಾನಕರವಾಗಿರುತ್ತದೆ.
ನಾವು ಒಂದೇ ಸೂರಿನಡಿಯಲ್ಲಿ ಗ್ರಾಹಕ ವಸ್ತುಗಳು ದೊರೆಯಬೇಕೆಂಬ ಉತ್ಕಟ ಅಭಿಲಾಷೆಯಿಂದ ಕೆಲವು ಸಂದರ್ಭಗಳಲ್ಲಿ ಹೊರಗಿನ ರಾಜ್ಯಗಳಿಂದಲೂ ಉತ್ತಮ ಗುಣಮಟ್ಟದ ವಸ್ತುಗಳನ್ನು ಹೋಲ್‌ಸೇಲ್ ದರದಲ್ಲಿ ಖರೀದಿಸಿ ಮಾರುಕಟ್ಟೆಯ ಸ್ಪರ್ಧಾತ್ಮಕ ದರದಲ್ಲಿ ಪೂರೈಸುತ್ತಿದ್ದೇವೆ. ಈ ವಸ್ತುಗಳ ಗುಣಮಟ್ಟ ಹಾಗೂ ದರವನ್ನು ಪರಿಶೀಲಿಸಿ ಎಲ್ಲಾ ಕೊಳ್ಳುವ ವ್ಯವಹಾರಗಳನ್ನು ನಮ್ಮಲ್ಲಿಯೇ ಮಾಡಬೇಕೆಂದು ಗ್ರಾಹಕ ಸದಸ್ಯರಲ್ಲಿ ವಿನಂತಿಸಿಕೊಳ್ಳುತ್ತೇವೆ.
8) ಪತ್ತು ಮತ್ತು ಮಾರಾಟ ಜೋಡಣೆ:
ನಾವು ಈ ಸಹಕಾರಿ ವರ್ಷದಲ್ಲಿ ಕೃಷಿ ಹುಟ್ಟುವಳಿಗಳಿಂದ ಅಡಿಕೆ ಪ್ರಮಾಣ 2988-53-000ಕ್ವಿ. ರಖಂ ರೂ: 9,56,45,496-00 ಕಾಳುಮೆಣಸು ಪ್ರಮಾಣ 12-30-700ಕ್ವಿ. ರಖಂ ರೂ:391822-00 ಯಾಲಕ್ಕಿ 12-900 ಕೆ.ಜಿ. ರಖಂ ರೂ: 15,885-00 ಶುಂಠಿ 66-000ಕೆ.ಜಿ ರೂ:1419.00 ಬಾಳೆಕಾಯಿ 59-000 ಕೆ.ಜಿ ರೂ:596-96 ಟಿ.ಎಸ್.ಎಸ್. ಶಿರಸಿ ಇವರ ಮೂಲಕ ಮಾರಾಟ ಮಾಡಿ ಪತ್ತು ಮತ್ತು ಮಾರಾಟ ಜೋಡಣೆ ಮಾಡಿರುತ್ತೇವೆ. ಅಲ್ಲದೇ ಟಿ.ಎಸ್.ಎಸ್ ಅವರಿಂದ ರೂ: 2,24,727-00 ಗಳ ರಿಬೇಟ್ ಪಡೆದಿರುತ್ತೇವೆ. ಹಾಗೂ ಮಾಲ ವಿಕ್ರಿಗಾಗಿ ರೂ. 88884.00 ಕೊಡತಕ್ಕ ವಿಕ್ರಿ ಬೋನಸ್ ಎಂದು ನಮೂದಿಸಿದ್ದೇವೆ.
9) ಆಡಳಿತ:
ವರದಿಯ ವರ್ಷದಲ್ಲಿ 14 ಬಾರಿ ಆಡಳಿತ ಸಮಿತಿ ಸಭೆ ಜರುಗಿದ್ದು, ನಿರ್ದೇಶಕರು ಸಂಘದ ವ್ಯವಹಾರವನ್ನು ಪರಿಶೀಲಿಸಿ ಆಡಳಿತ ಬಗ್ಗೆ ಸೂಕ್ತ ಗಮನ ಇಟ್ಟಿರುತ್ತಾರೆ. ಸಿಬ್ಬಂದಿವರ್ಗದವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸದಸ್ಯರಿಗೆ ಸೇವೆಗೆ ಒತ್ತು ನೀಡಿ ವ್ಯವಹಾರ ವೃದ್ಧಿಗೆ ಮತ್ತು ಸಂಘ ಪ್ರಗತಿ ಹೊಂದಲು ಕಾರಣರಾಗಿರುತ್ತಾರೆ.
10) ಲೆಕ್ಕಪರಿಶೋಧನೆ:
ಉದಯ್ ಶೆಟ್ಟಿ & ಕಂಪೆನಿ, ಚಾರ್ಟರ್ಡ ಅಕೌಂಟಂಟ್ಸ್, ಇವರ ಪರವಾಗಿ ಸಿಎ ಎಮ್.ಎಸ್.ಶೆಟ್ಟಿ ಇವರು ಈ ವರ್ಷದ ಲೆಕ್ಕಪರಿಶೋಧನೆಯನ್ನು ಮಾಡಿರುತ್ತಾರೆ. ಅಲ್ಲದೇ ಸೂಕ್ತ ಸಲಹೆ ಸೂಚನೆ ನೀಡಿರುತ್ತಾರೆ. ಮತ್ತು ಲೆಕ್ಕಪರಿಶೋಧನೆಯ ವರ್ಗವನ್ನು ’ಅ’ ವರ್ಗದಲ್ಲಿ ವರ್ಗೀಕರಿಸಿ ದೃಢೀಕರಿಸಿರುತ್ತಾರೆ. ಅವರಿಗೆ ಅನಂತಾನಂತ ಧನ್ಯವಾದಗಳು.
11) ಟಿ.ಎಸ್.ಎಸ್. ಆಸ್ಪತ್ರೆ/ ಟಿ.ಎಸ್.ಎಸ್. ರೈತರಕ್ಷಾಕವಚ ಯೋಜನೆ
ಜಿಲ್ಲೆಯ ಸುಸಜ್ಜಿತ ಆಸ್ಪತ್ರೆಯಾದ ಟಿ.ಎಸ್.ಎಸ್. ಆಸ್ಪತ್ರೆಯಲ್ಲಿಯೇ ಸದಸ್ಯರು ತಮ್ಮ ಕುಟುಂಬದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಮೂಲಕ ವೈದ್ಯಕೀಯ ಖರ್ಚನ್ನು ಕಡಿಮೆಗೊಳಿಸಿಕೊಳ್ಳಬೇಕಾಗಿ ವಿನಂತಿ.
ಟಿ.ಎಸ್.ಎಸ್. ಸಂಸ್ಥೆಯ ಸದಸ್ಯರ ರೈತರಕ್ಷಾಕವಚ ಯೋಜನೆಯಲ್ಲಿ ನಮ್ಮ ಸದಸ್ಯರಿಗೂ ಅವಕಾಶ ನೀಡಿದ್ದರಿಂದ ತಾವು ಈಗಾಗಲೇ ಪಾಲ್ಗೊಂಡಿದ್ದೀರಿ. ಇದು ಕೃಷಿ ಅವಘಡ ಯೋಜನೆ ಮತ್ತು ಆರೋಗ್ಯ ಸುರಕ್ಷೆ ಯೋಜನೆಗಳನ್ನು ಒಂದುಗೂಡಿಸಿ ರೂಪಿಸಿದ ಯೋಜನೆ ಆಗಿರುತ್ತದೆ. ಈಗಾಗಲೇ ಇದನ್ನು ಮಹಸೂಲ ವಿಕ್ರಿ ಪ್ರಮಾಣದ ಆಧಾರದಲ್ಲಿ ಕುಟುಂಬದ ಎಲ್ಲರಿಗೂ ಪೂರ್ಣ ಪರಿಹಾರ ಲಭ್ಯವಾಗುವಂತೆ ರೂಪಿಸಿ ತುಂಬುವ ಮೊತ್ತವನ್ನೂ ಟಿ.ಎಸ್.ಎಸ್. ನವರು ಹೆಚ್ಚಿಸಿರುತ್ತಾರೆ. ಬೇರೆ ಆಸ್ಪತ್ರಗಳಲ್ಲಿ ಅಡ್ಮಿಟ್ ಆದ ಬಿಲ್ಲುಗಳೂ ಕೆಲ ನಿಯಮಗಳ ಪ್ರಮಾಣದಲ್ಲಿ ಪರಿಹಾರಕ್ಕೆ ಒಳಪಡಲಿದೆ. ಈ ವರ್ಷ ರೂ. 3,30,500.00 ಗಳನ್ನು ಯೋಜನೆಗೆ ತುಂಬಲಾಗಿತ್ತು. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿ 20 ಜನರಿಗೆ 2,95,216.00 ಹಾಗೂ ಕೃಷಿ ಅವಘಡಕ್ಕೆ 25,000.00 ಅಂತೂ ರೂ. 3,20,216.00 ಪರಿಹಾರ ಬಂದಿರುತ್ತದೆ. ಕಾರಣ ಎಲ್ಲ ಸದಸ್ಯರು ಪೂರ್ಣ ಪ್ರಮಾಣದ ಮಾಲವಿಕ್ರಿಯನ್ನು ಸಂಘದಲ್ಲೇ ಮಾಡಿ ಕೃಷಿ ಅಘಢ ಮತ್ತು ತೀವೃ ಆರೋಗ್ಯ ಸಂಬಂಧಿ ಸೌಲಭ್ಯ ಪಡೆದುಕೊಳ್ಳಲು ಕೋರುತ್ತೇವೆ.
15) ರೈತರ ಕೂಲಿ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಬೆಣಗಾಂವ್ ಶಾಖೆಯಲ್ಲಿ ರೈತರ ಅಡಿಕೆ ಸುಲಿಯುವ ಏರ್ಪಾಡನ್ನು ಕಳೆದ 5 ವರ್ಷಗಳಿಂದ ಮಾಡುತ್ತಿರುವುದು ತಮಗೆಲ್ಲಾ ವೇದ್ಯವಾದ ವಿಷಯವೇ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರೈತರ ಅಡಿಕೆ ಸುಲಿದಿದ್ದು ಹಸಿಅಡಿಕೆ 94.02 ಕ್ವಿಂ. ಚಾಲಿ ಅಡಿಕೆ 368.67ಕ್ವಿಂ ಒಟ್ಟು 462.69 ಕ್ವಿಂ ಆಗಿದೆ. ಅಲ್ಲದೆ ಬೆಣಗಾಂವ, ಮುಂಡಗನಮನೆ ಹಾಗೂ ದೇವನಳ್ಳಿಯಲ್ಲಿಯೂ ಅಡಿಕೆ ಆರಿಸಿಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೀಗೆ ಮಹಸೂಲನ್ನು ಮಾರುಕಟ್ಟೆಗೆ ಸಜ್ಜುಗೊಳಿಸುವ ರೂಪಾಂತರ ಪ್ರಕ್ರಿಯೆಯಲ್ಲಿ ನಾವು ತೊಡಗಿದ್ದೇವೆಂದು ಹೇಳಲು ಸಮಾಧಾನವೆನಿಸುತ್ತದೆ. ಇದೇ ರೀತಿ ಅಡಿಕೆ ಸುಲಿಯುವ ಕಾರ್ಮಿಕರ ಹಾಗೂ ಅಡಿಕೆ ಬೆಳೆಗಾರ ರೈತರ ಮಧ್ಯೆ ಕೊಂಡಿಯಾಗಲು ಬೆಣಗಾಂವ್ ಶಾಖೆಯಂತೆಯೇ ಉಳಿದೆರಡು ಶಾಖೆಗಳಲ್ಲಿ ಉತ್ಸುಕರಿದ್ದೇವೆಂದು ಮತ್ತೊಮ್ಮೆ ತಮಗೆ ಮನನ ಮಾಡಿಕೊಡುತ್ತಿದ್ದೇವೆ.
16) ಮುಂಡಗನಮನೆಯಲ್ಲಿ ಕಾರ್ಯನಿರ್ವಹಣೆಗೆ ವ್ಯವಸ್ಥಿತವಾದ ಕಟ್ಟಡ ಕೊರತೆ ಇದ್ದು ಸುಸಜ್ಜಿತವಾದ ಕಟ್ಟಡ ನಿರ್ಮಾಣ ಆಗಬೇಕಾಗಿದೆ. ಹಾಗೂ ಬೆಣಗಾಂವದಲ್ಲಿ ಸುಸಜ್ಜಿತ ಕೃಷಿ ಸಂಸ್ಕರಣಾ ಯಾರ್ಡ ಕಟ್ಟುವ ಅವಶ್ಯಕತೆಯಿದೆ. ಈ ಬಗ್ಗೆ ಸಾಲ, ಸಹಾಯಧನದ ಅವಕಾಶಾನುಸಾರ ಮುಂದುವರೆಯಲಾಗುವದೆಂಬ ಭರವಸೆ ನೀಡುತ್ತೇವೆ.
17)ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪ್ರಗತಿಯ ಉದ್ದೇಶದಿಂದ ರೈತ ಉತ್ಪಾದಕ ಕಂಪನಿಗಳನ್ನು (ಎಫ್.ಪಿ.ಓ) ಸ್ಥಾಪಿಸಲು ವಿಶೇಷ ಒತ್ತು ನೀಡುತ್ತಿವೆ. ರೈತರ ಬೆಂಬಲಕ್ಕೆ ಸದಾ ನಿಲ್ಲುವ ನಮ್ಮ ಸಂಘವು ರೈತರಿಗೆ ಉಪಯುಕ್ತವಾದ ಯೋಜನೆಗೆ ಕೈಜೋಡಿಸುವದು ಅವಶ್ಯವಾದ್ದರಿಂದ ಸದರಿ ಎಫ್.ಪಿ.ಓ. ಪ್ರಾರಂಭಿಸಲು ಬಾಹ್ಯವಾಗಿಯೇ ಆದರೂ ಕ್ರಿಯಾತ್ಮಕವಾಗಿ ಬೆಂಬಲ ನೀಡುತ್ತಿದೆ. ಈ ಮೂಲಕ ರೈತರ ಉತ್ಪಾದನೆ, ಆದಾಯ ಹೆಚ್ಚಿಸಲು ಸಾಕಷ್ಟು ಉಪಯೋಗ ಆಗಬಹುದಾದ್ದರಿಂದ ಎಲ್ಲ ರೈತರೂ ಈ ಎಫ್.ಪಿ.ಓ. ದ ಸದಸ್ಯರಾಗಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.
ಕೃತಜ್ಞತೆಗಳು:
ಸರಕಾರದ ಬಡ್ಡಿ ಸಹಾಯಧನ ಯೋಜನೆಯನ್ನು ರೈತರಿಗೆ ಮುಟ್ಟಿಸುವ ಘನ ಕಾರ್ಯವನ್ನು ಮಾಡಿ ಅದಕ್ಕೆ ಅಗತ್ಯ ಸಹಕಾರ ನೀಡಿದ ಮತ್ತು ಸಂಘಕ್ಕೆ ಕಾಲಕಾಲಕ್ಕೆ ಸಾಲ ವ್ಯವಸ್ಥೆ ಮತ್ತು ಅಗತ್ಯ ಮಾರ್ಗದರ್ಶನ ನೀಡಿದ ಮತ್ತು 2019-20 ರ ಉತ್ತಮ ಸಹಕಾರಿ ಸಂಘಂದು ಜಿಲ್ಲಾಮಟ್ಟದ ಪ್ರಶಸ್ತಿ ನೀಡಿದ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ, ಶಿರಸಿಯ ಅಧ್ಯಕ್ಷರೂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಾನ್ಯ ಶ್ರೀ ಎಸ.ಎಂ. ಹೆಬ್ಬಾರ ಅವರಿಗೆ, ಉಪಾಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಅಲ್ಲದೇ ಬ್ಯಾಂಕಿನ ಎಮ್ ಡಿ ಯವರಿಗೆ, ಕಾಲಕಾಲಕ್ಕೆ ನಮ್ಮ ಸಂಘಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿರುವ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ, ಶಿರಸಿಯ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆಗಳು.
ನಮ್ಮ ಸಂಘದ ಆರ್ಥಿಕ ಆಧಾರಸ್ತಂಭದಂತಿರುವ ಟಿ.ಎಸ್.ಎಸ್. ಸಂಸ್ಥೆಯು ಅಡಿಕೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಅಡಿಕೆ ವಿಕ್ರಿ ಮಾರುಕಟ್ಟೆ ಹಾಗೂ ಶಿಲ್ಕಿಗೆ ಗೋದಾಮು ಉತ್ತಮ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಹಣಕಾಸಿನ ನೆರವನ್ನು ನೀಡುತ್ತಿರುವದಲ್ಲದೆ ನಮಗೆ ವಿವಿದೋದ್ದೇಶಗಳಲ್ಲಿ ಸಹಕಾರಿಯಾಗಿದೆ. ಅಲ್ಲದೇ ಅನೇಕ ಗ್ರಾಹಕ ವಸ್ತುಗಳು ಹಾಗೂ ಕೃಷಿಗೆ ಸಂಬಂಧಪಟ್ಟ ಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣ, ಪಶು ಆಹಾರ ಪೂರೈಸುವುದಲ್ಲದೇ ಪಶುತಳಿ ಆಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬೈಪ್ ಸಂಸ್ಥೆಯವರ ಪಶುತಳಿ ಅಭಿವೃದ್ಧಿ ಯೋಜನಾ ಘಟಕಕ್ಕೆ ಧನಸಹಾಯ ಮಾಡಿ ನಮ್ಮ ಕಾರ್ಯಕ್ಷೇತ್ರದ ದೇವನಳ್ಳಿಯಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿದೆ. ಮತ್ತು ನಮ್ಮ ಎಲ್ಲಾ ಹಾಗೂ ನಮ್ಮ ಮಾರಾಟ ವ್ಯವಹಾರವನ್ನು ಪರಿಗಣಿಸಿ ಪ್ರತಿವರ್ಷ ಪ್ರಶಸ್ತಿಯನ್ನು ನೀಡುವುದರ ಮೂಲಕ ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಟಿ.ಎಸ್.ಎಸ್.ನ ಅಧ್ಯಕ್ಷರಿಗೂ, ಉಪಾಧ್ಯಕ್ಷರಿಗೂ, ಪದಾಧಿಕಾರಿಗಳಿಗೂ, ಪ್ರಧಾನ ವ್ಯವಸ್ಥಾಪಕ,ಹಾಗೂ ಸಿಬ್ಬಂದಿ ವರ್ಗಕ್ಕೆ ಅನಂತಾನಂತ ಕೃತಜ್ಷತೆಗಳು.
ನಮ್ಮ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆಯವರು ನಮ್ಮ ಸಂಘದ ಕಾರ್ಯಕ್ಷೇತ್ರಕ್ಕೆ ಆಗಮಿಸಿದಾಗ, ನಮ್ಮ ಸಂಘಕ್ಕೆ ಭೇಟಿ ಕೊಟ್ಟು ನಮಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಅವರಿಗೂ ಕೃತಜ್ಞತೆಗಳು. ಅಲ್ಲದೇ ಆಗಾಗ ನಮಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿರುವ ಸಂಸದ ಅನಂತಕುಮಾರ ಹೆಗಡೆಯವರಿಗೂ ಕೃತಜ್ಞತೆಗಳು.
ನಮ್ಮ ಸಂಘಕ್ಕೆ ಸಕಾಲಿಕ ಆರ್ಥಿಕ ಸಹಾಯ ನೀಡಿದ ಎನ್.ಸಿ.ಡಿ.ಸಿ. ಸಂಸ್ಥೆಗೆ ಹಾಗೂ ಅವರ ಸಿಬ್ಬಂದಿವರ್ಗದವರಿಗೆ ಕೃತಜ್ಞತೆಗಳು.
ಹಾಗೂ ಸಂಘಕ್ಕೆ ಗೋಡೌನ್ ನಿರ್ಮಿಸಲು ಸಾಲದ ನೆರವು ನೀಡಿದ್ದಲ್ಲದೇ ಸದಸ್ಯರಿಗೆ ಬೇಕಾದ ಬೇರೆ ಬೇರೆ ಉದ್ದೇಶಗಳ ಮಾಧ್ಯಮಿಕ ಸಾಲವನ್ನು ನೇರವಾಗಿ ನಮ್ಮ ಸಂಘಕ್ಕೆ ನೀಡಿದ ನಬಾರ್ಡ್ ಬೆಂಗಳೂರಿನ ಸಿ.ಜಿ.ಎಂ. ಹಾಗೂ ಅಧಿಕಾರಿಗಳಿಗೆ ಅಲ್ಲದೇ ಕಾಲ ಕಾಲಕ್ಕೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ನಬಾರ್ಡಿನ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ರೇಜಿಸ್ ರವರಿಗೂ ಕೃತಜ್ಞತೆಗಳು.
ನಮ್ಮ ಸಂಘಕ್ಕೆ ಸಾಲ ಸೌಲಭ್ಯ ನೀಡಿ ಪ್ರೋತ್ಸಾಹ ನೀಡುತ್ತಿರುವ ಎನ್.ಸಿ.ಡಿ.ಸಿ. ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕಛೇರಿಯ ಅಧಿಕಾರಿಗಳಿಗೆ ಕೃತಜ್ಞತೆಗಳು.
ನಮ್ಮ ಕೃಷಿ ಪೂರಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸಿ ರೈತರ ಕೃಷಿ ಉತ್ಪನ್ನ ಸಂಗ್ರಹಿಸಲು ಗೋದಾಮು ನಿರ್ಮಿಸಿಕೊಟ್ಟಿರುವ, ಇನ್ನ್ನೂ ನಮ್ಮ ಗೋದಾಮು ಅವಶ್ಯಕತೆ ಪೂರೈಸಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಶಿರಸಿ ಇದರ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿ ವರ್ಗದವರಿಗೆ ಹಾರ್ದಿಕ ಕೃತಜ್ಞತೆಗಳು.
ನಮ್ಮ ರೈತರಿಗೆ ಅವರ ತೋಟಗಾರಿಕಾ ಬೆಳೆಗಳ ಬಗ್ಗೆ ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಸದಾ ಸಹಕರಿಸುತ್ತಿರುವ ಡಾ| ಶಿವಶಂಕರ ಮೂರ್ತಿ ಕೃಷಿ ವಿಜ್ಞಾನ ಕೇಂದ್ರ ಶಿರಸಿರವರಿಗೆ, ಮತ್ತು ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ ಹಾಗೂ ಶ್ರೀ ಸತೀಶ ಹೆಗಡೆ, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಎಲ್ಲಾ ಹಿರಿಯ, ಕಿರಿಯ ಸಿಬ್ಬಂದಿಗಳಿಗೂ ಕೃತಜ್ಞತೆಗಳು.
ಸಂಘದ ವ್ಯವಹಾರಕ್ಕೆ ಸಹಕರಿಸಿದ ದಿ ಅಗ್ರಿಕಲ್ಚರಲ್ ಸರ್ವಿಸ್ ಡೆವಲಪ್‌ಮೆಂಟ್ ಸೊಸೈಟಿ ಲಿ., ಶಿರಸಿ ಹಾಗೂ ಎ.ಪಿ.ಎಂ.ಪಿ.ಸಿ.ಸೊಸೈಟಿ ಶಿರಸಿ, ಇವುಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೂ ಕೃತಜ್ಞತೆಗಳು. ಸಂಘದ ಕಾರ್ಯಚಟುವಟಿಗಳನ್ನು ಸುಗಮವಾಗಿ ಮುಂದುವರೆಸಿಕೊಂಡು ಹೋಗಲು ಸಂಘಕ್ಕೆ ಕಾಲ ಕಾಲಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ ಉಪನಿಬಂಧಕರು, ಸಹಕಾರಿ ಸಂಘಗಳು, ಕಾರವಾರ ಹಾಗೂ ಸಹಾಯಕ ನಿಬಂಧಕರು, ಶಿರಸಿ ಹಾಗೂ ಸಹಕಾರಿ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆಗಳು.
ನಮಗೆ ಕೋರ್‌ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿ, ನಮಗೆ ನಮ್ಮ ಸದಸ್ಯರಿಗೆ ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಸ್ಥೆ ನೀಡುತ್ತಿರುವ ಎಕ್ಸಿಸ್ ಬ್ಯಾಂಕ್, ಶಿರಸಿಯ ಶಾಖಾ ವ್ಯವಸ್ಥಾಪಕರಿಗೆ iತ್ತು ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆಗಳು. ಅಲ್ಲದೇ ಪಿ.ಎಮ್.ಸಿ. ಬ್ಯಾಂಕ್, ಶಿರಸಿ ಮತ್ತು ವಿಜಯಾಬ್ಯಾಂಕ್ (ಬ್ಯಾಂಕ ಆಫ್ ಬರೋಡಾ) ಇದರ ಎ.ಪಿ.ಎಮ್.ಸಿ. ಶಿರಸಿ ಹಾಗೂ ಹೆಗಡೆಕಟ್ಟಾ ಶಾಖೆಗಳ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿವರ್ಗಕ್ಕೂ ಕೃತಜ್ಞತೆಗಳು.
ಸಂಘದ ವ್ಯವಹಾರಕ್ಕೆ ಪ್ರೋತ್ಸಾಹ ನೀಡುತ್ತಿರುವ ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಗ್ರಾಮ ಪಂಚಾಯತ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪಶುವೈದ್ಯ ಇಲಾಖೆ ಅಲ್ಲದೇ ಬೈಪ್ ಸಂಸ್ಥೆಯ ಅಧಿಕಾರಿಗಳಿಗೂ ಹಾಗೂ ಇತರ ಇಲಾಖೆಗಳ ಅಧಿಕಾರಿಗಳಿಗೆ, ಪದಾಧಿಕಾರಿಗಳಿಗೆ ಸಿಬ್ಬಂದಿವರ್ಗದವರಿಗೂ ಕೃತಜ್ಞತೆಗಳು. ನಮ್ಮ ಭಾಗದಲ್ಲಿ ಎಫ್.ಪಿ.ಓ. ಸ್ಥಾಪನೆಯ ಯತ್ನದಲ್ಲಿ ಸಹಕರಿಸುತ್ತ ಕೃಷಿ ಉತ್ತೇಜನಕ್ಕೂ ಆಸಕ್ತಿ ವಹಿಸಿ ಸಂಘದೊಂದಿಗೆ ನಿಕಟವಾಗಿರುವ ಸ್ಕೊಡವೆಸ್ ಶಿರಸಿ ಇವರಿಗೂ ಕೃತಜ್ಞತೆಗಳು.
ಸಂಘದೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ದೈನಂದಿನ ವ್ಯವಹಾರಗಳಲ್ಲೂ ಭಾಗವಹಿಸುತ್ತಿರುವ ಎಲ್ಲಾ ಸದಸ್ಯ ಬಾಂಧವರಿಗೆ, ಸಂಘದ ಪದಾಧಿಕಾರಿಗಳಿಗೆ ಮತ್ತು ಆಸಕ್ತಿಯಿಂದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ನಮ್ಮ ಸಂಘದ ಸಿಬ್ಬಂದಿಗಳಿಗೆ ನಮ್ಮ ಕೃತಜ್ಞತೆಗಳು. ಸಂಘದಲ್ಲಿ ಪ್ರಾಮಾಣಿಕವಾಗಿ ವ್ಯವಹರಿಸಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಸದಸ್ಯ ಬಾಂಧವರಿಗೆ ತುಂಬಾ ಋಣಿಯಾಗಿರುತ್ತೇವೆ. ಸಂಘಕ್ಕೆ ಹಾಗೂ ಸದಸ್ಯರಿಗೆ ಹೆಚ್ಚಿನ ಅಭಿವೃದ್ಧಿಗಾಗಿ ಶ್ರೀ ರಾಮಲಿಂಗೇಶ್ವರನಲ್ಲಿ ಪ್ರಾರ್ಥಿಸುತ್ತಾ ವರದಿಯನ್ನು ಪೂರ್ಣಗೊಳಿಸುತ್ತಿದೇವೆ.