• Slide
    Slide
    Slide
    previous arrow
    next arrow
  • ಬಸ್ ತಂಗುದಾಣದ ವ್ಯವಸ್ಥೆ ಕಲ್ಪಿಸಿ; ಡಿಸಿಗೆ ಮನವಿ

    300x250 AD

    ಭಟ್ಕಳ: ತಾಲೂಕಿನ ಕಾಯ್ಕಿಣಿ ಬಸ್ತಿಯಲ್ಲಿ ಬಸ್ ತಂಗುದಾಣದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಭಟ್ಕಳ ಯುವ ಕಾಂಗ್ರೇಸ್ ಹಾಗೂ ಸ್ಥಳೀಯ ಸಾರ್ವಜನಿಕರು ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು.

    ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಸ್ತಿಯ ಗ್ರಾಮದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೊಗಿದ್ದು ಬಸ್ಸು ಹಾಗೂ ಖಾಸಗಿ ವಾಹನಗಳ ಪ್ರಯಾಣಕ್ಕಾಗ ಸಾರ್ವಜನಿಕರು, ವಿದ್ಯಾರ್ತಿಗಳು ಈ ಹೆದ್ದಾರಿಯನ್ನು ಅವಲಂಬಿಸಿದ್ದಾರೆ. ಆದರೆ ಈ ಹೆದ್ದಾರಿಯಲ್ಲಿ ಯಾವುದೆ ಬಸ್ ತಂಗುದಾಣದ ವ್ಯವಸ್ಥೆ ಇಲ್ಲವಾಗಿದ್ದು ಸಾರ್ವಜನಿಕರು ಮಳೆ ಹಾಗೂ ಬಿಸಿಲಿಗೆ ಹೆದ್ದಾರಿಯ ಪಕ್ಕದಲ್ಲೇ ನಿಂತು ವಾಹನವನ್ನು ಏರಲು ಪರಿತಪಿಸುವಂತಾಗಿದೆ.

    300x250 AD

    ಹೊಸದಾಗಿ ಹೆದ್ದಾರಿಯನ್ನು ನಿರ್ಮಿಸಿದ ಐಆರ್.ಬಿ. ಕಂಪನಿಯವರೂ ಸಹ ಬಸ್ ತಂಗುದಾಣವನ್ನು ನಿರ್ಮಿಸಲಿಲ್ಲ. ಬಸ್ತಿಯ ಸುತ್ತಮುತ್ತಲಿನ ಗ್ರಾಮಗಳಾದ ಹೆರಾಡಿ, ತರ್ನಮಕ್ಕಿ, ಸಭಾತಿ,ಉತ್ತರಕೊಪ್ಪ, ದೇವಿಕಾನ, ಗುಮ್ಮನಹಕ್ಲು, ಕೈಕಿಣಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಬಿಸಿಲು, ಗಾಳಿ ಮಳೆಯಲ್ಲಿಯೆ ಹೆದ್ದಾರಿಯ ಪಕ್ಕದಲ್ಲೆ ನಿಂತು ಉರಿಬಿಸಿಲು, ಮಳೆ ಗಾಳಿಯನ್ನು ಅನುಭವಿಸಬೇಕಾಗಿದೆ. ಇದೊಂದು ಸಾರ್ವಜನಿಕ ಸಮಸ್ಯೆ ಎಂದು ಪರಿಗಣಿಸಿ ಜಿಲ್ಲಾಧಿಕಾರಿಗಳು ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ವ್ಯವಸ್ಥಿತವಾದ ಬಸ್ ತಂಗುನಿಲ್ದಾಣ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಮದರ್ಭದಲ್ಲಿ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಸಂತೋಷ ನಾಯ್ಕ, ಕಾಂಗ್ರೇಸ್ ನಗರ ಘಟಕದ ಅಧ್ಯಕ್ಷ ಸುಧಾಕರ ನಾಯ್ಕ, ದಯಾನಂದ ನಾಯ್ಕ ,ಮಹೇಶ ನಾಯ್ಕ, ಸುರೇಶ ನಾಯ್ಕ, ರಾಜೇಶ ನಾಯ್ಕ ಮತ್ತಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top