ಭಟ್ಕಳ: ಉಗ್ರರ ಕರಿನೆರಳು ಹಿಂದೂಗಳ ಪ್ರಸಿದ್ಧ ಧಾರ್ಮಿಕ ಕೇಂದ್ರ ಮುರುಡೇಶ್ವರಕ್ಕೆ ಉಗ್ರರ ಕರಿ ನೆರಳು ಬಿದ್ದಿರುವುದು ತುಂಬಾ ಅಪಾಯಕಾರಿ ವಿಷಯ. ವಿರೂಪಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶಿವನ ಮೂರ್ತಿಯ ಚಿತ್ರವನ್ನು ವಿರೂಪಗೊಳಿಸಿದ ಚಿತ್ರ ಹರಿಬಿಟ್ಟ ಆರೋಪಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಟ್ಕಳ ಮಾಜಿ ಶಾಸಕ ಮಂಕಾಳ ವೈದ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಐಸಿಸ್ ಉಗ್ರಗಾಮಿಗಳ ನಿಯತಕಾಲಿಕೆಯಲ್ಲಿ ಶಿವನ ಶಿರಚ್ಚೇದಿತ ಚಿತ್ರವನ್ನು ತನ್ನ ಮುಖಪುಟದಲ್ಲಿ ಪ್ರಕಟಣೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ನನ್ನ ಗಮನಕ್ಕೆ ಬಂದಿದ್ದು ಇಂದು ಖಂಡನೀಯ ಕೃತ್ಯವಾಗಿದೆ.
ನನ್ನ ಕ್ಷೇತ್ರದಲ್ಲಿ ಇಂತಹ ಯಾವುದೇ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಬೇಕು. ಈ ಕೃತ್ಯದ ಹಿಂದಿನ ರೂವಾರಿ ಯಾರೆಂದು ಸರಕಾರಿ ಶೀಘ್ರವೆ ಪತ್ತೆಹಚ್ಚಿ ಶಿಕ್ಷೆ ನೀಡಬೇಕು ಎಂದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುರುಡೇಶ್ವರ ದೇವಸ್ತಾನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.