• Slide
    Slide
    Slide
    previous arrow
    next arrow
  • ಹೊನ್ನಾವರಕ್ಕೆ ಕುಮಟಾ ತ್ಯಾಜ್ಯ; ಗಾಡಿ ವಾಪಸ್

    300x250 AD


    ಹೊನ್ನಾವರ: ಘನತ್ಯಾಜ್ಯ ಘಟಕವಿಲ್ಲದ ಕುಮಟಾ ಪುರಸಭೆ ಕಸವನ್ನು ಪಕ್ಕದ ಹೊನ್ನಾವರಕ್ಕೆ ಕಸ ಹಾಕಲು ಬಂದ ತ್ಯಾಜ್ಯ ತುಂಬಿದ ವಾಹನವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಆರೋಗ್ಯ ನಿರೀಕ್ಷಕರು ತಡೆದು ವಾಪಸ್ ಕಳುಹಿಸಿದ್ದಾರೆ.

    ಪಟ್ಟಣದ ತ್ಯಾಜ್ಯ ವಿಲೇವಾರಿ ಮಾಡಲು ತ್ಯಾಜ್ಯ ವಿಲೇವಾರಿ ಘಟಕವನ್ನು ಇಟ್ಟುಕೊಳ್ಳದೆ ಹೊನ್ನಾವರಕ್ಕೆ ತಾಜ್ಯ ವಿಲೇವಾರಿ ಮಾಡಲು ಬಂದ ವಾಹನವನ್ನು ಸ್ಥಳೀಯರ ಮಾಹಿತಿ ಮೇರೆಗೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶಿವರಾಜ ಮೇಸ್ತ ಹಾಗೂ ಆರೋಗ್ಯ ನಿರೀಕ್ಷಕರಾದ ಸುನಿಲ್ ಗಾವಡೆ ವಾಹನವನ್ನು ವಾಪಸ್ ಕುಮಟಾಕ್ಕೆ ಕಳುಹಿಸಿದ್ದಾರೆ.

    ಎರಡು ದಿನದ ಹಿಂದೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು, ವಿವಿಧ ಸಂಘಟನೆಗಳು ಹಾಗೂ ಸಮಾನ ಮನಸ್ಕರು ಸೇರಿ ಕುಮಟಾ ಕಸ ಹೊನ್ನಾವರಕ್ಕೆ ವಿಲೇವಾರಿ ಮಾಡಬಾರದು ಮಾಡಿದರೆ ಮುಂದಿನ ನಡೆಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಮನವಿ ನೀಡಿದ್ದರು. ಆ ಕಾರಣದಿಂದಾಗಿ ಅಧ್ಯಕ್ಷರು ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ಜಮಾವಣೆ ಆಗಿ ಅವಾಂತರ ಆಗಬಾರದೆಂಬ ಉದ್ದೇಶದಿಂದ ತಂದಿರುವ ತಾಜ್ಯವನ್ನೂ ವಾಪಸ್ ಕಳುಸಿದ್ದಾರೆ.

    300x250 AD

    ಯಾವುದೇ ಅರ್ಹತೆ ಇಲ್ಲದೇ ರಾಜಕೀಯ ಪ್ರಭಾವದಿಂದ ಪ್ರಶಸ್ತಿ ಪಡೆದುಕೊಂಡ ಕುಮಟಾ ಪುರಸಭೆ ಮತ್ತೆ ಹೊನ್ನಾವರದಲ್ಲಿ ಕಸ ಹಾಕಲು ಮುಂದಾಗಿದೆ. ಅಧ್ಯಕ್ಷರೇ ಮುಂದೆ ನಿಂತು ವಾಹನ ವಾಪಸ್ ಕಳುಹಿಸಿದ್ದು ಪ್ರಶಂಸನೀಯ. ಮತ್ತೊಮ್ಮೆ ಕುಮಟಾ ತಾಲೂಕಿನಿಂದ ಹೊನ್ನವರಕ್ಕೆ ಕಸ ವಿಲೇವಾರಿ ಮಾಡುವ ಪ್ರಯತ್ನ ಮಾಡಿದರೆ ಶಾಸಕರು ಹಾಗೂ ಅಧಿಕಾರಿಗಳು ಪ್ರತಿಭಟನೆಯ ಕಾವು ಅನುಭವಿಸಬೇಕಾಗುತ್ತದೆ.– ಉದಯರಾಜ್ ಮೇಸ್ತ, ಅಧ್ಯಕ್ಷರು, ಕರವೇ

    Share This
    300x250 AD
    300x250 AD
    300x250 AD
    Leaderboard Ad
    Back to top