ಶಿರಸಿ: ಕೃಷಿಯಿಂದ ಯುವಕರು ಹಿಂದೆ ಸರಿಯುತ್ತಿರುವ ಇಂದಿನ ಸಂದರ್ಭದಲ್ಲಿ ಕೃಷಿ ಅರಿವು ಕಾರ್ಯಕ್ರಮಗಳು ಹೆಚ್ಚಿನ ಮಹತ್ವ ಪಡೆಯುತ್ತಿವೆ ಎಂದು ಕೃಷಿ ಇಲಾಖೆ ಹಿರಿಯ ವಿಜ್ಞಾನಿ ಎಮ್.ಮಂಜು ಹೇಳಿದರು.
ಕಲ್ಲಿಯ ಮೊರಾರ್ಜಿ ಶಾಲೆಯಲ್ಲಿ ಶುಕ್ರವಾರ ಕೃಷಿ ವಿಜ್ಞಾನ ಕೇಂದ್ರ ಹಮ್ಮಿಕೊಂಡಿದ್ದ ಕೃಷಿ ಮತ್ತು ಪರಿಸರದ ಕುರಿತ ರಾಷ್ಟೀಯ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೃಷಿಯಲ್ಲಿ ಇಂದು ಇರುವ ಅವಕಾಶ ಮತ್ತು ಕೃಷಿಪೂರಕ ಚಟುವಟಿಕೆಗಳ ಮೂಲಕ ಯಶಸ್ಸು ಗಳಿಸುವ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಕಿ ಅನಿತಾ ಹೆಗಡೆ ಮಾತನಾಡಿ, ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೇ ಮೇಲು. ಕೃಷಿ ವಿಜ್ಞಾನಿಗಳ ಸಲಹೆ ಮೇರೆಗೆ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಜೇಶ್ವರಿ ಕಾಳೆಹಳ, ಗಿರಿಜಾ ಪೂಜಾರಿ, ವಿಜ್ಞಾನಿಗಳಾದ ಡಾ. ಶಿವಶೆಂಕರಮೂರ್ತಿ, ಡಾ. ರೂಪಾ ಪಾಟೀಲ್ ಇತರರು ಇದ್ದರು