ಶಿರಸಿ: ತಾಲೂಕಿನ ಕೊಪ್ಪದ ಬೈನೇಗುಂಡಿ ಭೂತೇಶ್ವವರ ದೇವಸ್ಥಾನದ ಭೂತಪ್ಪನ ದೀಪೋತ್ಸವವನ್ನು ಕಳೆದ 25 ವರ್ಷಗಳಿಂದ ನಡೆಸುತ್ತಾ ಬಂದಿದ್ದು, ಈ ವರ್ಷ ಕಾರ್ತಿಕ ಮಾಸದ ಸೋಮವಾರ ನ.29 ರಂದು ಧಾರ್ಮಿಕ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ನ.28 ಭಾನುವಾರ ಸಂಜೆ 7.30 ಗಂಟೆಯಿಂದ ಗಣಪತಿ ಪೂಜೆ ಪುಣ್ಯ, ಮಹಾಸಂಕಲ್ಪ, ಪ್ರಾರ್ಥನಾ, ಫಲ ಸಮರ್ಪಣೆ, ಕಳಸ ಸ್ಥಾಪನೆ, ರಾಕ್ಷೋಘ್ನ ಹವನ, ಕೂಷ್ಮಾಂಡ ಬಲಿ ಹಾಗೂ ನ.29 ಸೋಮವಾರ ಬೆಳಗ್ಗೆ ಶ್ರೀದೇವರಲ್ಲಿ ರುದ್ರಾಭಿಷೇಕ, ಸ್ಥಾನ ಬಿಂಬ ಶುದ್ಧಿ, ಅಧಿವಾಸ, ಕಲಾವೃದ್ಧಿ ಹವನ, ರುದ್ರ ಹವನ, ಸಂಜೆ ದೀಪೋತ್ಸವ, ಹಾಗೂ ರಾಜೋಪಚಾರ ಸೇವೆ ನಡೆಯಲಿದೆ. ಅಂದು ಧಾರ್ಮಿಕ ಕಾರ್ಯಕ್ರಮ ನಡೆದ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 10.30ಕ್ಕೆ ಚಿಣ್ಣರ ಯಕ್ಷಗಾನ ‘ದ್ರೌಪದಿ ಪ್ರತಾಪ’ ಶ್ರೀ ವೀರ ಶಕ್ತಿ ಮಾರುತಿ ಯಕ್ಷಗಾನ ಮಂಡಳಿ, ಕಾಗಲ್ ಕುಮಟಾ ಇವರ ವತಿಯಿಂದ ನಡೆಯಲಿದೆ ಎಂದು ಶ್ರೀ ಭೂತೇಶ್ವರ ಸಮಿತಿ ಮೇಲಿನಕೊಪ್ಪ ಇವರು ತಿಳಿಸಿದ್ದಾರೆ.