ಶಿರಸಿ: ನಗರದ ಪ್ರಸಿದ್ಧ ಅಂಜನಾದ್ರಿ ಶ್ರೀ ಮಾರುತಿ ದೇವರ ಕಾರ್ತಿಕ ದೀಪೋತ್ಸವವು ನ.27 ರಂದು ಶನಿವಾರ ರಾತ್ರಿ 8 ಗಂಟೆಗೆ ಅದ್ಧೂರಿಯಾಗಿ ನಡೆಸಲು ತಿರ್ಮಾನಿಸಲಾಗಿದೆ.
ನಗರದ ಮರಾಠಿಕೊಪ್ಪದಲ್ಲಿರುವ ಅಂಜನಾದ್ರಿ ಬೆಟ್ಟದ ತಪ್ಪಲಿನ ಅಂಜನಾದ್ರಿ ದೇವಸ್ಥಾನವನ್ನು ಕಳೆದ ವರ್ಷ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಮುತವರ್ಜಿ ವಹಿಸಿ ಅಭಿವೃದ್ಧಿ ಪಡಿಸಿದ್ದರು. ನಂತರದಲ್ಲಿ ತಪ್ಪಲು ಇನ್ನಷ್ಟು ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಾಟಾಗಿತ್ತು. ಈಗ ಕೊವಿಡ್ ನಂತರದಲ್ಲಿ ಕಾರ್ತಿಕ ದೀಪೋತ್ಸವವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕು ಎಂದು ಅಂಜನಾದ್ರಿ ಶ್ರೀ ಮಾರುತಿ ಸೇವಾ ಸಮಿತಿ ಯವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.